ಹುಬ್ಬಳ್ಳಿ: ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ನಂಬಿಕೊಂಡು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಶಾಸಕ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯುತ್ತಿದೆ. ಇದು ವಿಶೇಷ ಕಾರ್ಯಕ್ರಮವಾಗಿದ್ದು, ರೈತರ ಪರವಾಗಿ ಉಚಿತವಾಗಿ ಮಾಡುತ್ತಿರುವ ಕಾರ್ಯ ಯಶಸ್ವಿಯಾಗಿ ನಡೆಯಲಿ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮೋಡ ಬಿತ್ತನೆ ವಿಮಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹಾವೇರಿ ಭಾಗದಲ್ಲಿ ವಿಶೇಷವಾಗಿ ಸಮಸ್ಯೆಗಳನ್ನು ಪರಿಶೀಲನೆ ನಡೆಸಿ ಐದು ಜನ ಶಾಸಕರ ನೇತೃತ್ವದಲ್ಲಿ ಇಂತಹದೊಂದು ಕಾರ್ಯ ನಡೆದಿರುವುದು ವಿಶೇಷವಾಗಿದೆ ಎಂದರು.
ಈ ಬಗ್ಗೆ ಸಿಎಂ ಅವರೊಂದಿಗೆ ಸಮಾಲೋಚನೆ ನಡೆಸಿ ಮೋಡ ಬಿತ್ತನೆಯ ಕಾರ್ಯವನ್ನು ಮಾಡುತ್ತೇನೆ ಎಂದು ಹೇಳಿದರು. ಸದ್ಯ ಎಲ್ಲೆಲ್ಲಿ ಮೋಡ ಬಿತ್ತನೆ ಅವಶ್ಯಕತೆ ಇದೆಯೋ ಅಲ್ಲಿ ಹಾಗೂ ಫಲವತ್ತಾದ ಮೋಡಗಳಲ್ಲಿ ಬಿತ್ತನೆ ಮಾಡಲಾಗುತ್ತದೆ ಬರಗಾಲದಿಂದ ಜನರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಈ ನಿಟ್ಟಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ಶುಭ ಹಾರೈಸಿದರು.
ಇಂದಿನಿಂದ 3 ದಿನದ ವರೆಗೆ ಮೋಡ ಬಿತ್ತನೆ: ಬರಗಾಲದ ಛಾಯೆಯ ಬಗ್ಗೆ ಹವಾಮಾನ ವರದಿ ಮುನ್ಸೂಚನೆ ಇತ್ತು. ಈ ಬಾರಿ ಬರದ ಪರಿಸ್ಥಿತಿ ಬರಬಹುದು ಅನ್ನೋ ಸೂಚನೆ ಮೇರೆಗೆ, 2 ತಿಂಗಳಿಂದ ತಯಾರಿ ನಡೆಸಿ, ನಮ್ಮ ಪಿಕೆಕೆ ಇನಿಶಿಯೇಟಿವ್ ಸಂಸ್ಥೆಯಿಂದ ಮೋಡ ಬಿತ್ತನೆಗೆ ಮುಂದಾಗಿದ್ದು, ಮೂರು ದಿನಗಳ ಕಾಲ ಮೋಡ ಬಿತ್ತನೆ ಮಾಡಲಾಗುತ್ತಿದೆ ಎಂದು ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ಈಗಾಗಲೇ 130 ಕ್ಕೂ ಹೆಚ್ಚು ತಾಲೂಕುಗಳು ಬರ ಅಂತ ತೀರ್ಮಾನ ಮಾಡುವ ಪರಿಸ್ಥಿತಿ ಇದೆ. ನಿನ್ನೆ ಪ್ರಾಯೋಗಿಕವಾಗಿ 2-3 ಕಡೆ ಮೋಡ ಬಿತ್ತನೆ ಮಾಡಿದ್ದೇವೆ. ಇಂದು ಅಧಿಕೃತವಾಗಿ ಹೆಚ್ ಕೆ ಪಾಟೀಲ್ ಅವರು ಚಾಲನೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಮಿನಿಸ್ಟರಿ ಆಫೀಸ್ ಅರ್ಥ್ ಸೈನ್ಸ್ ರೀಸರ್ಚ್ ಸಾಕಷ್ಟು ರೀಸರ್ಚ್ ಮಾಡಿತ್ತು, ಇದರಿಂದ ಮಳೆ ಬರೋದು ಖಚಿತ ಅನ್ನೋ ಮಾಹಿತಿಯಿಂದ ಮಾಡಿದ್ದೇವೆ. ಮೋಡ ಬಿತ್ತನೆ ಸಕ್ಸಸ್ ಆಗುತ್ತೆ ಅನ್ನೋದನ್ನ ನಾವು ಹೇಳೋಕೆ ಆಗಲ್ಲ. ಮುಖ್ಯಮಂತ್ರಿಗಳೇ ಪರ್ಮಿಷನ್ ಕೊಟ್ಟಿದ್ದು, ಸಿಎಂ ಕೆಳಗೆ 60 ಡಿಪಾರ್ಟ್ಮೆಂಟ್ ಇವೆ. ಮೋಡ ಬಿತ್ತನೆಯಿಂದ ಶೇಕಡಾ 28 ರಷ್ಟು ಮಳೆ ಆಗುತ್ತೆ ಅಂತ ಇದೆ. ಹಿಂದಿನ ಸರ್ಕಾರ ಇದಕ್ಕೆ ಟೆಂಡರ್ ಕರಿಬೇಕಿತ್ತು. ಹೀಗಾಗಿ ನಾವು ಹಾವೇರಿ ಜಿಲ್ಲೆಗಷ್ಟೇ ಮಾಡ್ತಾ ಇದ್ದೇವೆ. 2009 ರಿಂದ ಈ ಬಗ್ಗೆ ನನಗೆ ಜ್ಞಾನ ಇದೆ. ನಮ್ಮ ಸ್ವಂತ ವಿಮಾನ ಇರೋದ್ರಿಂದ ಕಡಿಮೆ ಆಗುತ್ತೆ. ಬೇರೆ ಕಡೆ ಬಾಡಿಗೆ ತೆಗದುಕೊಂಡರೆ 1 ಗಂಟೆಗೆ 10 ಲಕ್ಷ ಖರ್ಚು ಆಗುತ್ತೆ. ನಮಗೆ ಈ ಬಾರಿ 15 ರಿಂದ 20 ಗಂಟೆಗಳು ಆಗುತ್ತೆ ಎಂದರು.
ಇದನ್ನೂ ಓದಿ: ಹಾವೇರಿ: ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಮುಂದಾದ ಶಾಸಕ ಪ್ರಕಾಶ್ ಕೋಳಿವಾಡ