ಹುಬ್ಬಳ್ಳಿ: ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ಆರ್ಬಿಐಯನ್ನು ಅಸ್ಥಿರಗೊಳಿದ್ದೇ ಪ್ರಮುಖ ಕಾರಣ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಸರ್ಕಾರ ಹತ್ತು ವರ್ಷ ಅಧಿಕಾರ ಮಾಡಿದೆ. ವಾಜಪೇಯಿ ಆರು ವರ್ಷ ಪ್ರಧಾನಿಯಾಗಿದ್ರು. ನರೇಂದ್ರ ಮೋದಿ ಆರು ವರ್ಷ ಆಯ್ತು ಪ್ರಧಾನಿಯಾಗಿದ್ದಾರೆ. ಇವರ ಕಾಲದಲ್ಲಿ ಆರ್ಬಿಐಗೆ ಸ್ವಾತಂತ್ರ್ಯ ಕೊಡಬೇಕಿತ್ತು. ಮೋದಿಯವರ ಆಡಳಿತದಲ್ಲಿ ಆರ್ಬಿಐಅನ್ನ ಅಸ್ಥಿರಗೊಳಿಸಲಾಯಿತು. ಮೊದಲಿನಿಂದ ಅದು ಸ್ವಾಯತ್ತ ಸಂಸ್ಥೆಯಾಗಿದೆ. ದುರಂತ ಅಂದ್ರೆ ಸದ್ಯ ಆರ್ಬಿಐನಲ್ಲಿ ಕೇಂದ್ರ ಸರ್ಕಾರ ಭಾಗಿಯಾಯ್ತು. ಹಿಂದಿನ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಕೇಂದ್ರಕ್ಕೆ ಆಸ್ಪದ ನೀಡಿಲರಲಿಲ್ಲ ಎಂದರು.
ಬ್ಯಾಂಕ್ಗಳಿಗೆ ಈ ಸ್ಥಿತಿ ಬರಲು ಅರ್ಹತೆ ಇಲ್ಲದಿದ್ದರೂ ಸಾಲ ನೀಡಿ ಬ್ಯಾಂಕ್ ದುರ್ಬಳಕೆ ಮಾಡಿದ್ದಾರೆ. ಹೀಗಾಗೇ ಇಂದು ಬ್ಯಾಂಕ್ಗಳು ಆರ್ಥಿಕ ಮುಗಟ್ಟು ಎದುರಿಸುತ್ತಿವೆ. ನೋಟ್ ಬಂದ್ ಆಗಿದ್ದ ಸಮಯದಲ್ಲಿ ಹಲವಾರು ಅಕ್ರಮಗಳು ನಡೆದವು. ಕೆಲವೊಂದು ಉದ್ಯಮಿಗಳಿಗೆ ಅವರ ಆಸ್ತಿಗಿಂತ ಹೆಚ್ಚಿನ ಸಾಲವನ್ನ ಬ್ಯಾಂಕ್ಗಳು ನೀಡಿವೆ. ಕೆಲವೊಂದಿಷ್ಟು ಹಣಕಾಸು ಸಲಹೆಗಾರರೇ ರಾಜೀನಾಮೆ ನೀಡಿ ಹೋದ್ರು ಎಂದರು.
ಬಸನಗೌಡ ಯತ್ನಾಳ್ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ಯತ್ನಾಳ್ ಈಗ ದೊಡ್ಡವರಾಗಿ ಬೆಳೆದಿದ್ದಾರೆ. ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದರು.