ETV Bharat / state

ವಾಣಿಜ್ಯನಗರಿಯಲ್ಲಿ ಗಸ್ಟ್ ಟು ಡಸ್ಟ್ ಚಾಲೆಂಜ್ 2.0 ಗೇಮ್ ಶೋ

ಸತ್ವಮ್ ಫಿಜಿಯೋಥೆರಪಿ ಮತ್ತು ಫಿಟ್ನೆಸ್ ಪುನರ್ವಸತಿ ಕೇಂದ್ರದ ವತಿಯಿಂದ ಇಂದು ನಗರದ ಕೆ.ಎಲ್.ಇ ಟೆಕ್​ನಲ್ಲಿ ಗಸ್ಟ್ ಟು ಡಸ್ಟ್​ ಚಾಲೆಂಜ್ 2.0 ಗೇಮ್ ಶೋ ನಡೆಯಿತು.

Hubli news
ವಾಣಿಜ್ಯನಗರಿಯಲ್ಲಿ ಗಸ್ಟ್ ಟು ಡಸ್ಟ್ ಚಾಲೆಂಜ್ 2.0 ಗೇಮ್ ಶೋ
author img

By

Published : Feb 2, 2020, 11:31 PM IST

Updated : Feb 2, 2020, 11:39 PM IST

ಹುಬ್ಬಳ್ಳಿ: ನಗರದ ಕೆ.ಎಲ್.ಇ ಟೆಕ್​ನಲ್ಲಿ ಸತ್ವಮ್ ಫಿಜಿಯೋಥೆರಪಿ ಮತ್ತು ಫಿಟ್ನೆಸ್ ಪುನರ್ವಸತಿ ಕೇಂದ್ರದ ವತಿಯಿಂದ ಇಂದು ಗಸ್ಟ್ ಟು ಡಸ್ಟ್​ ಚಾಲೆಂಜ್ 2.0 ಗೇಮ್ ಶೋ ಹಮ್ಮಿಕೊಳ್ಳಲಾಗಿತ್ತು.

ಈ ಮೊದಲು 2018ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮ ಜನಪ್ರೀಯತೆ ಪಡೆದಿದ್ದು, ಈ ಹಿನ್ನೆಲೆಯಲ್ಲಿ ಗಸ್ಟ್ ಟು ಡಸ್ಟ್ ಚಾಲೆಂಜ್ 2.0 ನಡೆಸಿದ್ರು. ಸ್ಪರ್ಧಾಳುಗಳು ನಿರ್ದಿಷ್ಟ ದೂರವನ್ನು ಓಡುವುದರ ಜೊತೆಗೆ ದಾರಿಯಲ್ಲಿ ಕೆಲವು ಮೋಜಿನ ಆಸಕ್ತಿದಾಯಕ ಅಡೆತಡೆಗಳನ್ನು ದಾಟುವ ಸ್ಪರ್ಧೆ ಇದಾಗಿತ್ತು. ಆಟದಲ್ಲಿ ಹವ್ಯಾಸಿ, ಪ್ರೋ ಎಂದು ಎರಡು ವರ್ಗಗಳನ್ನಾಗಿ ಮಾಡಲಾಗಿತ್ತು.

ವಾಣಿಜ್ಯನಗರಿಯಲ್ಲಿ ಗಸ್ಟ್ ಟು ಡಸ್ಟ್ ಚಾಲೆಂಜ್ 2.0 ಗೇಮ್ ಶೋ

ಸ್ಪರ್ಧೆಯಲ್ಲಿ ಹಾವೇರಿ, ಬೆಳಗಾವಿ, ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಕೊಲ್ಹಾಪುರ, ಬೆಂಗಳೂರು, ಮುಂಬೈ ಸೇರಿದಂತೆ ವಿವಿಧೆಡೆಯಿಂದ ಸುಮಾರು 200ರಿಂದ 300 ಸ್ಪರ್ಧಾಳುಗಳು ಭಾಗವಹಿಸಿದ್ದರು. ವಿಜೇತರಾದ ಅಭ್ಯರ್ಥಿಗಳಿಗೆ ಸ್ವರ್ಣ ಗ್ರೂಪ್ ಮುಖ್ಯಸ್ಥ ವಿ.ಎಸ್.ವಿ.ಪ್ರಸಾದ ಬಹುಮಾನ ವಿತರಣೆ ಮಾಡಿದರು.

Last Updated : Feb 2, 2020, 11:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.