ETV Bharat / state

ಗುಜರಾತ್ ವಿಧಾನಸಭೆ ಫಲಿತಾಂಶ ಕರ್ನಾಟಕ ಬಿಜೆಪಿಗೆ ಬೂಸ್ಟರ್: ಜಗದೀಶ್ ಶೆಟ್ಟರ್

ಗುಜರಾತ್ ರಾಜ್ಯದ ಜನರು ಭಾರತೀಯ ಜನತಾ ಪಕ್ಷದ ಅಧಿಕಾರದ ಕಾರ್ಯವೈಖರಿ ಹಾಗೂ ನರೇಂದ್ರ ಮೋದಿ ನಾಯಕತ್ವಕ್ಕೆ ಮನ್ನಣೆ ನೀಡಿರುವುದು ನಿಜಕ್ಕೂ ಅಭಿನಂದನಾ ಪೂರಕವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಭಿಮತ ವ್ಯಕ್ತಪಡಿಸಿದ್ದಾರೆ.

jagdish shettar
jagdish shettar
author img

By

Published : Dec 8, 2022, 2:15 PM IST

Updated : Dec 8, 2022, 4:28 PM IST

ಹುಬ್ಬಳ್ಳಿ: ಗುಜರಾತ್​​ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಭೂತಪೂರ್ವ ದಾಖಲೆಯ ಜಯ ಸಿಕ್ಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಆಡಳಿತ ಮೆಚ್ಚಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಗುಜರಾತ್ ರಾಜ್ಯದ ಅಭೂತಪೂರ್ವ ಜಯ ನಿಜಕ್ಕೂ ರಾಜ್ಯದ ಚುನಾವಣೆಗೆ ಬೂಸ್ಟರ್ ಆಗಿ ಪರಿಣಮಿಸುತ್ತದೆ. ಗುಜರಾತ್ ರಾಜ್ಯದ ಜನರು ಭಾರತೀಯ ಜನತಾ ಪಕ್ಷದ ಅಧಿಕಾರದ ಕಾರ್ಯವೈಖರಿ ಹಾಗೂ ನರೇಂದ್ರ ಮೋದಿ ನಾಯಕತ್ವಕ್ಕೆ ಮನ್ನಣೆ ನೀಡಿರುವುದು ನಿಜಕ್ಕೂ ಅಭಿನಂದನಾ ಪೂರಕವಾಗಿದೆ ಎಂದರು.

ಜಗದೀಶ್ ಶೆಟ್ಟರ್

ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಗುಜರಾತ್ ಚುನಾವಣೆ ಫಲಿತಾಂಶ ರಾಜ್ಯದ ಚುನಾವಣೆಗೆ ದಿಕ್ಸೂಚಿ ಆಗದಿರಬಹುದು. ಆದರೆ, ಈ ಚುನಾವಣೆ ರಾಜ್ಯದಲ್ಲಿ ದೊಡ್ಡಮಟ್ಟದ ಪರಿಣಾಮ ಮೂಲಕ ಬೂಸ್ಟರ್ ಆಗಿ ಪರಿಣಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂಓದಿ:ಹಿಮಾಚಲದಲ್ಲಿ ಕಾಂಗ್ರೆಸ್​ ಮೇಲುಗೈ.. ಬಿಜೆಪಿಗೆ ಮುಳುವಾದ ಬಂಡಾಯ

Last Updated : Dec 8, 2022, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.