ETV Bharat / state

ಸಿಎಂ ಹೆಚ್‌ಡಿಕೆ ಆಗ ಗ್ರಾಮ ವಾಸ್ತವ್ಯ ಮಾಡಿದ್ದ ಧಾರವಾಡ ಜಿಲ್ಲೆಯ ನಾವಳ್ಳಿ ಈಗ ಹೀಗಿದೆ... - grama vastaya

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಎಷ್ಟರ ಮಟ್ಟಿಗೆ ಲಾಭ ತಂದುಕೊಟ್ಟಿದೆ? ಈ ಯೋಜನೆಯಿಂದ ಕುಗ್ರಾಮದಲ್ಲಿನ ಸಮಸ್ಯೆಗಳು ಪರಿಹಾರ ಕಂಡಿವೆಯಾ ಇಲ್ವಾ ಅನ್ನೋ ಚರ್ಚೆ ಶುರುವಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ 2006 ರಲ್ಲಿ ವಾಸ್ತವ್ಯ ಹೂಡಿದ್ದ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮ
author img

By

Published : Jun 7, 2019, 10:39 AM IST

ಹುಬ್ಬಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿ ಈ ಹಿಂದೆ ಸಿಎಂ ಆಗಿದ್ದಾಗ 2006ರಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಇದು ಹಳೆಯ ವಿಚಾರವಾದ್ರೂ ಸದ್ಯ ಆ ಗ್ರಾಮದ ಪರಿಸ್ಥಿತಿ ಏನಾಗಿದೆ ಅನ್ನೋದು ಇದೀಗ ಚರ್ಚೆಯ ಮುನ್ನೆಲೆಗೆ ಬಂದಿದೆ. ಗ್ರಾಮಸ್ಥರಲ್ಲಿ ಕೆಲವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರೆ ಮತ್ತೊಂದಿಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಂದು ಕುಮಾರಸ್ವಾಮಿ ಮಾಡಿದ ಗ್ರಾಮ ವಾಸ್ತವ್ಯ ಅವರಿಗೆ ಪ್ರಸಿದ್ಧಿ ತಂದುಕೊಟ್ಟಿತ್ತು. ಇದೀಗ ಮತ್ತೆ ಅದೇ ದಾರಿಯನ್ನು ಅನುಸರಿಸಲು ಮುಂದಾಗಿದ್ದಾರೆ. ಆದರೆ, ಈ ಪರಿಕಲ್ಪನೆ ಎಷ್ಟು ಲಾಭ ತಂದುಕೊಟ್ಟಿದೆ? ಈ ಯೋಜನೆಯಿಂದ ಕುಗ್ರಾಮದಲ್ಲಿನ ಸಮಸ್ಯೆಗಳು ಪರಿಹಾರ ಕಂಡಿವೆಯಾ ಅನ್ನೋದರ ಬಗ್ಗೆ ಸ್ವತಃ ನಾವಳ್ಳಿ ಗ್ರಾಮದ ಮುಖಂಡರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಮ್ಮ ಗ್ರಾಮದ ಅಭಿವೃದ್ಧಿ ನೂರಕ್ಕೆ ನೂರು ಆಗದೇ ಹೋದರು ಶೇ.60 ರಷ್ಟು ಆಗಿದೆ ಎಂದು ಹೇಳಬಹುದು. ಇನ್ನೂ ಶೇ.40 ರಷ್ಟು ಆಗಬೇಕು. ಶೌಚಾಲಯಗಳು, ಪೂರ್ಣ ಪ್ರಮಾಣದ ರಸ್ತೆಗಳು, ಸಮರ್ಪಕ ನೀರಿನ ವ್ಯವಸ್ಥೆ ಮಾಡಬೇಕು. ಕುಮಾರಸ್ವಾಮಿ ಅವರು ನಾವಳ್ಳಿಗೆ ಬರುವುದಕ್ಕಿಂತ ಮುನ್ನ ಇದು ಕುಗ್ರಾಮವಾಗಿತ್ತು. ಮೂಲಸೌಕರ್ಯಗಳಿಲ್ಲದೇ ಸೊರಗಿತ್ತು. ಗ್ರಾಮ ವಾಸ್ತವ್ಯ ಮಾಡಿದ ನಂತರ ಅಧಿಕಾರಿಗಳು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರು ನಮ್ಮ ಊರಿಗೆ ಬಂದು ಹೋದ ನಂತರ ಸ್ವಲ್ಪ ಮಟ್ಟಿಗೆ ಅಭಿವೃದ್ಧಿಯಾಗಿದೆ ಅನ್ನುತ್ತಾರೆ ಗ್ರಾಮದ ಮುಖಂಡ ಮಂಜುನಾಥ.

ಮುಖ್ಯಮಂತ್ರಿ ಕುಮಾರಸ್ವಾಮಿ 2006 ರಲ್ಲಿ ವಾಸ್ತವ್ಯ ಹೂಡಿದ್ದ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮ

ಕುಮಾರಸ್ವಾಮಿ ಕಳೆದ ಬಾರಿ ನಮ್ಮ ಮನೆಯಲ್ಲಿಯೇ ಗ್ರಾಮ ವಾಸ್ತವ್ಯ ಮಾಡಿದ್ದರು. ಅಂದು ಊಟ ಮಾಡಿ ಇಲ್ಲೆಯೇ ತಂಗಿದ್ದರು. ಆದರೆ, ಅಂದು ಅವರು ನಮಗೆ ನೀಡಿದ್ದ ಭರವಸೆಗಳು ಮಾತ್ರ ಹಾಗೇ ಇವೆ. ಬಡತನ ನಮ್ಮ ಬೆನ್ನ ಹಿಂದೆ ಬಿದ್ದಿದೆ. ಇದರಿಂದ ಇನ್ನೂ ಹೊರಬರಲಾಗುತ್ತಿಲ್ಲ. ಈಗ ಮನೆಯನ್ನು ರಿಪೇರಿ ಮಾಡಲಾಗುತ್ತಿದೆ. ಆದರೆ, ಇಷ್ಟು ನಿರ್ಲಕ್ಷ್ಯ ಸರಿ ಅಲ್ಲ ಎನ್ನುತ್ತಾರೆ ಮನೆ ಮಾಲೀಕರಾದ ಅಲ್ಲಾಬಿ ನದಾಫ್.

ಈ ಬಗ್ಗೆ ಮಾಜಿ ಶಾಸಕ ಎನ್​ ಹೆಚ್‌ ಕೋನರೆಡ್ಡಿ ಸಹ ಪ್ರತಿಕ್ರಿಯಿ ನೀಡಿದ್ದಾರೆ. ವಾಸ್ತವ್ಯ ಹೂಡಿದ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಲವು ಭರವಸೆಗಳನ್ನು ನೀಡಿದ್ದರು. ನೀಡಿದ ಭರವಸೆಯಲ್ಲಿ ಶೇ. 75ರಷ್ಟು ಈಡೇರಿಸಿದ್ದಾರೆ. ಗ್ರಾಮಕ್ಕೆ ಮೊದಲು ಸಮರ್ಪಕ ರಸ್ತೆ ಸಂಪರ್ಕ ಇರಲಿಲ್ಲ. ಯಾವುದಾದರೂ ಊರಿಗೆ ಹೋಗಬೇಕಾದರೆ ಸಮೀಪದ ಶಲವಡಿ, ತುಪ್ಪದ ಕುರಹಟ್ಟಿ, ಹಳ್ಳಿಕೇರಿ ಇಲ್ಲವೇ ಇಬ್ರಾಹಿಂಪುರದವರೆಗೆ ಐದಾರು ಕಿ.ಮೀ ನಡೆದುಕೊಂಡು ಹೋಗಿ ಬಸ್​ ಹತ್ತಬೇಕಿತ್ತು.

ಹಳ್ಳ ಬಂದಾಗ ಗರ್ಭಿಣಿಯರು, ರೋಗಿಗಳನ್ನು ಹರಸಾಹಸಪಟ್ಟು ದಾಟಿಸಬೇಕಾಗಿತ್ತು. ಮೊಣಕಾಲುದ್ದ ಚರಂಡಿ ನೀರು ಹರಿಯುತ್ತಿತ್ತು. ಈಗ ಸಾಕಷ್ಟು ಪ್ರಗತಿಯಾಗಿದೆ. ಈ ಮೊದಲು ಈ ಗ್ರಾಮಕ್ಕೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ಅದು ಹರಿಗೋಗಿದೆ ಎನ್ನುತ್ತಾರೆ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ಕಾರ್ಯದರ್ಶಿ ಎನ್ ಹೆಚ್ ಕೋನರೆಡ್ಡಿ.

Intro:ಹುಬ್ಬಳಿBody:ಸ್ಲಗ್:- ಸಿಎಂ ಗ್ರಾಮವಾಸ್ತವ್ಯ ಮಾಡಿದ ಊರಿನ ಅಭಿವೃದ್ಧಿ ಶೇ 60 ರಷ್ಟು..

ಹುಬ್ಬಳ್ಳಿ :- ನಮ್ಮ ಗ್ರಾಮದ ಅಭಿವೃದ್ಧಿ ನೂರಕ್ಕೆ ಕ್ಕೆ ನೂರು ಆಗದೇ ಹೋದರು ಶೇ.60 ರಷ್ಟು ಆಗಿದೆ ಎಂದು ಹೇಳಬಹುದು. ಇನ್ನೂ ಶೇ.40 ರಷ್ಟು ಗ್ರಾಮದಲ್ಲಿ ಶೌಚಾಲಯಗಳ ನಿರ್ಮಾಣ, ಪೂರ್ಣ ಪ್ರಮಾಣದ ರಸ್ತೆಗಳ ನಿರ್ಮಾಣ, ಸಮರ್ಪಕ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸಿ.ಎಂ ಕುಮಾರಸ್ವಾಮಿ 2006 ರಲ್ಲಿ ನವಲಗುಂದ ತಾಲ್ಲೂಕಿನ ನಾವಳ್ಳಿ ಗ್ರಾಮದ ಜನತೆಯ ಮಾತುಗಳು..

ವಾಓ:- ಹೌದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಹಿಂದೆ ಸಿಎಂ ಆಗಿದ್ದಾಗ ಅವರು ಮಾಡಿದ ಗ್ರಾಮ ವಾಸ್ತವ್ಯವೇ ಅವರಿಗೆ ಪ್ರಸಿದ್ಧಿ ತಂದುಕೊಟ್ಟು, ಗಣ್ಯರ ಪ್ರಶಂಸೆಗೂ ಕಾರಣವಾಗಿತ್ತು. ಆಗ ಸಿಎಂ ಗ್ರಾಮವಾಸ್ತವ್ಯ ಮಾಡಿದ ಊರುಗಳಲ್ಲಿ ನವಲಗುಂದ ತಾಲ್ಲೂಕಿನ ನಾವಳ್ಳಿ ಗ್ರಾಮವು ಕೂಡಾ ಒಂದಾಗಿದ್ದು ಆ ಸಮಯದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಅಭಿವೃದ್ದಿಯ ಮಂತ್ರ ಜಪಿಸಿದರು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶಾಲೆ-ಕಾಲೇಜು, ರಸ್ತೆ, ನೀರಿನ ಸಂಪರ್ಕ ಸೇರಿದಂತೆ ಈವರೆಗೆ ಶೇ.60ರಷ್ಟು ಗ್ರಾಮ ಅಭಿವೃದ್ದಿ ಕಂಡಿದೆ ಎಂದು ಹೇಳಬಹುದು.ಸಿಎಂ ಕುಮಾರಸ್ವಾಮಿ ನಾವಳ್ಳಿ ಗ್ರಾಮಕ್ಕೆ ಬರುವದಕ್ಕಿಂತ ಹಿಂದೆ ಗ್ರಾಮ ಕುಗ್ರಾಮ ಆಗಿತ್ತು. ಮೂಲ ಸೌಕರ್ಯಗಳಿಲ್ಲದೇ ಸೊರಗಿಹೋಗಿತ್ತು. ಸಿಎಂ ಗ್ರಾಮವಾಸ್ತವ್ಯ ಮಾಡಿದ ನಂತರ ಅಧಿಕಾರಿಗಳು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಆದ್ರೆ ನಮ್ಮ ಊರಿಗೆ ಬಂದು ಹೋದ ನಂತರ ಸ್ವಲ್ಪಮಟ್ಟಿಗೆ ಅಭಿವೃದ್ಧಿ ಆಗಿದೆ ಅನ್ನುತ್ತಾರೆ ನಾವಳ್ಳಿ ಗ್ರಾಮದ ಮಂಜುನಾಥ.

ಬೈಟ:-ಮಂಜುನಾಥ ಶೆರೊಳ್ಳಿ.
ಬೈಟ್:- ದೇವಪ್ಪ ಮಾಜಿ ಸೈನಿಕ
ನಾವಳ್ಳಿ ಗ್ರಾಮಸ್ಥರು.

ವಾಓ:ಕಳೆದ ಬಾರಿ ನಾವಳ್ಳಿ ಗ್ರಾಮದ ಅಲ್ಲಾಬಿ ನದಾಪ್ ಎಂಬವವರ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡುಬಾಗ ನಮ್ಮ ಮನೆಯಲ್ಲಿ ಇದ್ದರು ಮತ್ತು ನಮ್ಮ ಮನೆಯಲ್ಲಿ ಊಟ ಮಾಡಿ ಇಲ್ಲೆ ಇದ್ರು ಆದ್ರೆ ನಮ್ಮ ಮನೆಯ ಕುಟುಂಬಕ್ಕೆ ನೀಡಿದ ಭರವಸೆ ಹುಸಿಹೋಗಿವೆ ಈ ವರೆಗೆ ಅವರು ತಂಗಿದ್ದ ಮನೆಗೆ ನೀಡಿದ ಭರವಸೆಗಳು ಹಾಗೇ ಇವೆ. ಪರಿಣಾಮ ಕುಟುಂಬ ಬಡತನದಲ್ಲಿಯೇ ಇದ್ದೆವೆ ಇವಾಗ ಹಣ ಕೂಡಿಸಿ ಮನೆ ರೀಪೆರಿ ಮಾಡುತ್ತಿದ್ದವೆ ಎನ್ನುತ್ತಾರೆ.....ಮನೆಯ ಮಾಲೀಕ ದಾವಲಬಿ

ಬೈಟ್:- ಹುಚ್ಚುಸಾಬ ನದಾಪ್ :- ಗ್ರಾಮ ವಾತ್ಸವ್ಯ ಮಾಡಿದ ಮನೆಯ ಮಾಲಿಕರು.

ಬೈಟ್:- ಪಾತಿಮಾ ನದಾಪ್. ಹುಚ್ಚುಸಾಬನ ಸೊಸೆ‌.

ವಾಓ:- ಇನ್ನು ನಾವಳ್ಳಿ ಗ್ರಾಮಕ್ಕೆ ಸಿಎಮ್ ಕುಮಾರಸ್ವಾಮಿ ರಾಜಕೀಯ ಕಾರ್ಯದರ್ಶಿ ಎನ್ ಹೆಚ್, ಕೋನರೆಡ್ಡಿ ಕುಮಾರಸ್ವಾಮಿ ವಾಸ್ತವ್ಯ ಹೂಡಿದ ಮನೆಗೆ ಬೇಟಿ ನೀಡಿ ನಂತರ ಮಾತನಾಡಿದ ಅವರಿ.೨೦೦೬ ರಲ್ಲಿ ನಾವಳ್ಳಿ ಗ್ರಾಮದಲ್ಲಿ ಸಿಎಮ್ ಕುಮಾರಸ್ವಾಮಿ ಗ್ರಾಮ ವಾತ್ಸವ್ಯ ಮಾಡಿದ್ದರು ,ವಾತ್ಸವ್ಯ ಹೂಡಿದ ಮೇಲೆ ಹಲವಾರು ಭರವಸೆಗಳನ್ನು ನೀಡಿದರು,ನೀಡಿದ ಭರವಸೆ ಮೂಕ್ಕಲು ಭಾಗ ಮಾಡಿದ್ದಾರೆ,
ನಾವಳ್ಳಿ ಗ್ರಾಮಕ್ಕೆ ಮೊದಲು ಸಮರ್ಪಕ ರಸ್ತೆ ಸಂಪರ್ಕ ಇರಲಿಲ್ಲ. ಯಾವುದಾದರೂ ಊರಿಗೆ ಹೋಗಬೇಕಾದರೆ ಸಮೀಪದ ಶಲವಡಿ,ತುಪ್ಪದ ಕುರಹಟ್ಟಿ, ಹಳ್ಳಿಕೇರಿ ಇಲ್ಲವೇ ಇಬ್ರಾಹಿಂಪುರದವರೆಗೆ ಐದು ಕಿ.ಮೀ.ನಡೆದುಕೊಂಡು ಹೋಗಿಯೇ ಬಸ್ ಹಿಡಿತ ಬೇಕಾಗಿತ್ತು. ಹಳ್ಳ ಬಂದ ಸಮಯದಲ್ಲಿ ಗರ್ಭಿಣಿಯರನ್ನು ,ರೋಗಿಗಳನ್ನು ತೊಟ್ಟಿಲಲ್ಲಿ ಹೊತ್ತುಕೊಂಡು ದಾಟಿಸಬೇಕಾಗಿತ್ತು.ಮೊಣಕಾಲುದ್ದ ಚರಂಡಿ ನೀರು ಗ್ರಾಮದಲ್ಲಿ ಹರಿಯುತ್ತಿತ್ತು. ಈಗ ಸಾಕಷ್ಟು ಪ್ರಗತಿಯಾಗಿದೆ. ಕುಡಿಯುವ ನೀರಿನ ನಳ
ಮೊದಲು ಈ ಗ್ರಾಮಕ್ಕೆ ಬರಲು ಜನರು ಹೇದರತ್ತಿದ್ದರು,ಮತ್ತು ಈ ಗ್ರಾಮಕ್ಕೆ ಹೆಣ್ಣು ಕೋಡಲು ಹಿಂದೆ ಮುಂದೆತ ಮಾಡುತ್ತಿದ್ದರು,ಆದರೆ ಇವಾಗ ಹಿಂದೆ ತರಹ ಇಲ್ಲ' ಎಲ್ಲವು ಅಭಿವೃದ್ಧಿ ಆಗಿದೆ,ಎಂದು ಸಿಎಮ್ ಕುಮಾರಸ್ವಾಮಿ ರಾಜಕೀಯ ಕಾರ್ಯದರ್ಶಿ ಎನ್ ಹೆಚ್ ಕೋನರೆಡ್ಡಿ ಹೇಳಿದರು....

ಬೈಟ್:- ಎನ್ ಹೆಚ್ ಕೋನರೆಡ್ಡಿ ಕುಮಾರಸ್ವಾಮಿ ರಾಜಕೀಯ ಕಾರ್ಯದರ್ಶಿ.

ಇನ್ನೂ ಈ ನಾವಳ್ಳಿ ಗ್ರಾಮದಲ್ಲಿ ಸಿಎಂ ಗ್ರಾಮವಾಸ್ತವ್ಯ ಮಾಡಿದ ಪರಿಣಾಮ ಗ್ರಾಮದ ಅಭಿವೃದ್ಧಿ ಆಗಿದೆ ನಿಜಾ ಆದರೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ ಇನ್ನೂ ಗ್ರಾಮದ ರಸ್ತೆಗಳು, ಸಮರ್ಪಕ ನೀರು, ಶೌಚಾಲಯ, ಸೇತುವೆ ನಿರ್ಮಾಣ ಆಗಬೇಕಿದೆ. ಇದರ ಜೊತೆಗೆ ಹಂದಿಗನ ಹಳ್ಳ: ಸೇತುವೆ ನಿರ್ಮಾಣದ ಭರವಸೆಯನ್ನು ಸಹ ಈಡೇರಿಸಿಲ್ಲ ಗ್ರಾಮಕ್ಕೆ ಬಂದಾಗ ತಂಗಿದ್ದ ಮನೆಗೆ ನೀಡಿದ ಭರವಸೆಗಳು ಈಡೇರಿಸಬೇಕಾಗಿದೆ.ಈ ಗ್ರಾಮಕ್ಕೆ ಇನ್ನೊಂದು ಸಾರಿ ಬೇಟಿ ನೀಡುತ್ತಾರೆ ಕಾದು ನೋಡಬೇಕಾಗಿದೆ.....

_________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.