ಧಾರವಾಡ: ಅಜ್ಜಿ ಪ್ರತಿನಿಧಿಸಿದ್ದ ವಾರ್ಡ್ನಲ್ಲಿ ಮೊಮ್ಮಗಳು ಸ್ಪರ್ಧೆ ಮಾಡಿ ವಿಜಯಶಾಲಿಯಾಗಿದ್ದಾರೆ.
ತಾಲೂಕಿನ ರಾಮಾಪೂರ ಗ್ರಾಮದ 21 ವರ್ಷದ ಲಕ್ಷ್ಮೀ ಮಾದರ ಗೆಲುವು ಸಾಧಿಸಿದ್ದಾರೆ. ರಾಮಾಪೂರ ಗ್ರಾಮದ ವಾರ್ಡ್ ನಂಬರ್ 1 ರಿಂದ ಸ್ಪರ್ಧೆ ಮಾಡಿದ್ದರು. ಈ ಹಿಂದೆ ಅವರ ಅಜ್ಜಿ ರುಕ್ಮವ್ವ ಪ್ರತಿನಿಧಿಸಿದ್ದರು. ಅಜ್ಜಿ ಬದಲಿಗೆ ಮೊಮ್ಮಗಳು ಚುನಾವಣೆಗೆ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ.