ETV Bharat / state

ಗ್ರಾಪಂ ಚುನಾವಣೆ.. ಪ್ರತ್ಯೇಕ ವಾರ್ಡ್​​ನಲ್ಲಿ ಪತಿ-ಪತ್ನಿ‌ ಸ್ಪರ್ಧೆ

ನಾವಿಬ್ಬರು ಜನಸೇವೆ ಮಾಡುವ ಉದ್ದೇಶದಿಂದ ಈ ಬಾರಿ ಚುನಾವಣೆಗೆ ಧುಮುಕಿದ್ದೇವೆ. ಜನರು ನಮ್ಮನ್ನು ಗೆಲ್ಲಿಸಿದ್ರೆ ಗ್ರಾಮದ ಅಭಿವೃದ್ಧಿಗೆ ಬೇಕಾದ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮಸ್ಥರಿಗೆ ನೆರವಾಗುತ್ತೇವೆ..

ಪ್ರತ್ಯೇಕ ವಾರ್ಡ್​​ನಲ್ಲಿ ಪತಿ-ಪತ್ನಿ‌ ಸ್ಪರ್ಧೆ
Husband and wife participate election in Separate ward
author img

By

Published : Dec 18, 2020, 1:17 PM IST

ಧಾರವಾಡ : ಗ್ರಾಮ‌‌ ಪಂಚಾಯತ್‌ ಚುನಾವಣಾ ಕಣ ರಂಗೇರುತ್ತಿದ್ದು, ದಂಪತಿಯೊಂದು ಪ್ರತ್ಯೇಕ ವಾರ್ಡ್​ಗೆ ಸ್ಪರ್ಧೆ ನಡೆಸುತ್ತಿದೆ.

ತಾಲೂಕಿನ ಮುಗದ ಗ್ರಾಮದ ದ್ಯಾಮಣ್ಣ ಲಕ್ಕುಂಡಿ ಹಾಗೂ ಅವರ ಪತ್ನಿ ರೂಪಾ ಲಕ್ಕುಂಡಿ ಮುಗದ ಗ್ರಾಮ ಪಂಚಾಯತ್‌ ಅಖಾಡದಲ್ಲಿ‌ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಮುಗದ ಗ್ರಾಮ ಪಂಚಾಯತ್‌ ವಾರ್ಡ್​​ ನಂಬರ 4ಕ್ಕೆ ದ್ಯಾಮಣ್ಣಾ ಸ್ಪರ್ಧೆ ಮಾಡಿದ್ರೆ, ಇತ್ತ ಅದೇ ಗ್ರಾಮದ ವಾರ್ಡ್​​ ನಂ.1ಕ್ಕೆ ಅವರ ಪತ್ನಿ ರೂಪಾ ಲಕ್ಕುಂಡಿ‌ ಸ್ಪರ್ಧಿಸಿದ್ದಾರೆ.

ಪ್ರತ್ಯೇಕ ವಾರ್ಡ್​​ನಲ್ಲಿ ಪತಿ-ಪತ್ನಿ‌ ಸ್ಪರ್ಧೆ

ದ್ಯಾಮಣ್ಣಾ ಲಕ್ಕುಂಡಿ 2010ರ ಗ್ರಾಪಂ‌ ಚುನಾವಣೆಯಲ್ಲಿ ಸ್ಪರ್ಧಿಸಿ ಪಂಚಾಯತ್‌ ಪ್ರವೇಶಿಸಿದ್ದರು. 2015ರ ಚುನಾವಣೆಯಲ್ಲಿ ಸೋತಿದ್ದರು. ಆದರೆ, ರೂಪಾ ಲಕ್ಕುಂಡಿ ಮೊದಲ ಬಾರಿಗೆ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ.

ನಾವಿಬ್ಬರು ಜನಸೇವೆ ಮಾಡುವ ಉದ್ದೇಶದಿಂದ ಈ ಬಾರಿ ಚುನಾವಣೆಗೆ ಧುಮುಕಿದ್ದೇವೆ. ಜನರು ನಮ್ಮನ್ನು ಗೆಲ್ಲಿಸಿದ್ರೆ ಗ್ರಾಮದ ಅಭಿವೃದ್ಧಿಗೆ ಬೇಕಾದ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮಸ್ಥರಿಗೆ ನೆರವಾಗುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.