ಹುಬ್ಬಳ್ಳಿ: ಕ್ಲಬ್ ರಸ್ತೆಯ ಜಿಮಖಾನ್ ಕ್ಲಬ್ನಲ್ಲಿ ನಡೆದ ಜಿಮಖಾನ್ ಪ್ರೀಮಿಯರ್ ಲೀಗ್ (ಜಿಪಿಎಲ್) ಆರನೇ ಆವೃತಿಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಟಾಪ್ ಸೀಡ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಟಾಪ್ ಸೀಡ್ ಹಾಗೂ ಹಾಟ್ ಶಾಟ್ ತಂಡದ ಮಧ್ಯ ನಡೆದ ಫೈನಲ್ ಪಂದ್ಯದಲ್ಲಿ ಟಾಪ್ ಸೀಡ್ 3-2ರಲ್ಲಿ ಹಾಟ್ ಶಾಟ್ ಎದುರು ಗೆಲುವು ಸಾಧಿಸಿತು.
ಎ ವಿಭಾಗದಲ್ಲಿ ಟಾಪ್ ಸೀಡ್ ತಂಡದ ಮಯೂರ ಸಜ್ಜನ, ಬಿ 1 ವಿಭಾಗದಲ್ಲಿ ಹಾಟ್ ಶಾಟ್ ತಂಡದ ಕುಮಾರ ಹರಪ್ಪನಹಳ್ಳಿ, ಬಿ 2 ವಿಭಾಗದಲ್ಲಿ ಕೋಳಿವಾಡ ರಾಕ್ಸ್ ತಂಡದ ರಮೇಶ ಮಾಂಡ್ರೆ, ಬಿ 3 ವಿಭಾಗದಲ್ಲಿ ಹಾಟ್ ಶಾಟ್ ತಂಡದ ದೀಪಕ ಹಿರೇಮಠ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ವಿಜೇತರಿಗೆ ಬಹುಮಾನ ವಿತರಿಸಿದರು. ಅತಿಥಿಗಳಾಗಿ ವಿಜೇತಾ, ನಂದಕುಮಾರ, ಕ್ಲಬ್‍ನ ಅಧ್ಯಕ್ಷ ಅರುಣ ನಾಯಕ, ಗಿರೀಶ ವೀಣಾ, ದಿನೇಶ ಶೆಟ್ಟಿ ಮೊದಲಾದರು ಇದ್ದರು.