ಹುಬ್ಬಳ್ಳಿ: ಫೋನ್ ಪೇ ಕಸ್ಟಮರ್ ಕೇರ್‌ನಿಂದ ಮಾತನಾಡುತ್ತಿರುವುದಾಗಿ ನಂಬಿಸಿ, ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 44,778 ರೂ. ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ತಾಜ್‌ನಗರದ ನೂರಾನಿ ಮಸೀದಿ ಹತ್ತಿರದ ನಜವಾಸಿ ಜಾವೀದ್ ಮದನಿ ಎಂಬುವರೇ ವಂಚನೆಗೆ ಒಳಗಾದವರು. ಜಾವೀದ್ ಅವರಿಗೆ ವಂಚಕ ಕರೆ ಮಾಡಿ ಫೋನ್ ಪೇ ಆ್ಯಪ್ ಸಮಸ್ಯೆಯಿದ್ದು, ಅದನ್ನು ಸರಿಪಡಿಸಲು ಎನಿ ಡೆಸ್ಕ್ ಆ್ಯಪ್ ಮೊಬೈಲ್‌ಗೆ ಅಳವಡಿಸಿಕೊಳ್ಳಲು ಹೇಳಿದ್ದಾನೆ. ನಂತರ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ನ ಡೆಬಿಟ್ ಕಾರ್ಡ್ ಹಾಗೂ ಪಾಸ್ವರ್ಡ್ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ ಎನ್ನಲಾಗಿದೆ.
ಈ ಕುರಿತು ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.