ಹುಬ್ಬಳ್ಳಿ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ವಿದೇಶಿ ಸಿಗರೇಟ್ ಬ್ಯಾನ್ ಮಾಡಿರುವುದಾಗಿ ಹೇಳಿವೆ. ಆದ್ರೆ ಹುಬ್ಬಳ್ಳಿ - ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಅಕ್ರಮವಾಗಿ ಸಿಗರೇಟ್ ಮಾರಾಟವಾಗುತ್ತಿದೆ. ಗಾಂಜಾ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸರು ವಿದೇಶಿ ಸಿಗರೇಟ್ ಮಾರಾಟಗಾರರನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ನಡೆಯುತ್ತಿರುವ ಗಾಂಜಾ ಹಾಗೂ ವಿದೇಶಿ ಸಿಗರೇಟ್ ಮಾರಾಟದ ಜಾಲ ಪೊಲೀಸ್ ಇಲಾಖೆಗೆ ತಿಳಿಯದ ಸಂಗತಿಯೇನಲ್ಲ. ಪೊಲೀಸರ ಕಣ್ಣಿಗೆ ಮಣ್ಣೆರಚುವ ರೀತಿಯಲ್ಲಿ ವಿದೇಶಿ ಸಿಗರೇಟ್ ದಂಧೆ ಅವಳಿ ನಗರದಲ್ಲಿ ನಡೆಯುತ್ತಲೇ ಇದೆ. ಅಲ್ಲದೇ ಸಾಮಾನ್ಯ ಸಿಗರೇಟ್ಗಳಿಗಿಂತ ವಿದೇಶಿ ಸಿಗರೇಟ್ಗಳಲ್ಲಿ ನಿಕೋಟಿನ್ ಪ್ರಮಾಣ ಜಾಸ್ತಿಯಿದ್ದು, ಮಾನವ ದೇಹಕ್ಕೆ ಹಾನಿಕಾರಕವಾದ ಕೆಮಿಕಲ್ ಕೂಡ ಇದೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತೀಯ ಮಾದರಿ ಹೋಲುವ ವಿದೇಶಿ ಸಿಗರೇಟ್ಗಳು ಸಂಪೂರ್ಣ ಭಾರತೀಯ ಮಾರುಕಟ್ಟೆ ಆವರಿಸಿಕೊಂಡಿವೆ. ಇದು ಭಾರತೀಯ ಸುಂಕ ಹಾಗೂ ತೆರಿಗೆ ವಂಚನೆಗೆ ಕಂಡು ಕೊಂಡಿರುವ ವಾಮ ಮಾರ್ಗವಾಗಿದೆ ಎಂದು ಹೇಳಬಹುದು.