ಹುಬ್ಬಳ್ಳಿ : ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳನ್ನು ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ ಐದಕ್ಕೂ ಹೆಚ್ಚು ಮಕ್ಕಳು ಗಂಭಿರ ಗಾಯವಾದ ಘಟನೆ ಇಲ್ಲಿನ ಇಸ್ಲಾಂಪುರ್ ಹಾಗೂ ಅಲ್ತಫ್ ನಗರದಲ್ಲಿ ನಡೆದಿದೆ.
ಮಹ್ಮದ್ ಹಲಸಿ (8) ಇರ್ಷಾದ್ ಬುಕ್ ಬಂದರ್ (17) , ಸುಪೀಯಾನ್ (3), ಹಜರತ್ ಜಂಗ್ಲಿ (8), ಮಾವಿಯಾ ಕಿತ್ತೂರ (7) ಗಾಯಗೊಂಡ ಮಕ್ಕಳಾಗಿದ್ದು ಬೆನ್ನು ತೊಡೆಯ ಭಾಗ ಕಾಲುಗಳಿಗೆ ನಾಯಿಗಳು ಕಚ್ಚಿವೆ.
ನಗರದ ಚಿಟಗುಪ್ಪಿ ಆಸ್ಪತ್ರೆಗೆ ಮಕ್ಕಳನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ನಾಯಿಗಳ ಹಾವಳಿ ತಪ್ಪಿಸಬೇಕು ಎಂದು ನಗರದ ನಿವಾಸಿಗಳು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸ್ದಳೀಯರು ಕಿಡಿಕಾರಿದ್ದಾರೆ.