ETV Bharat / state

ರೌಡಿ ಶೀಟರ್​ ಫ್ರೂಟ್​ ಇರ್ಫಾನ್ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ - Firing from a stranger

ರೌಡಿ ಶೀಟರ್ ಆಗಿದ್ದ ಫ್ರೂಟ್ ಇರ್ಫಾನ್ ಮೇಲೆ ಬೈಕ್​​ನಲ್ಲಿ ಬಂದ ನಾಲ್ವರು ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಇರ್ಫಾನ್​ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Firing from a stranger on Rowdy Sheeter Fruit Irfan
ರೌಡಿ ಶೀಟರ್​ ಫ್ರೂಟ್​ ಇರ್ಫಾನ್ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ
author img

By

Published : Aug 6, 2020, 7:54 PM IST

ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯಲ್ಲಿರುವ ದುರ್ಗಾ ಬಾರ್ ಸಮೀಪ ನಿಂತಿದ್ದ ವ್ಯಕ್ತಿಗೆ ನಾಲ್ವರು ಅಪರಿಚಿತರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಎರಡು ಬೈಕ್​​​​​​ಗಳಲ್ಲಿ ಆಗಮಿಸಿದ ನಾಲ್ವರು ಅಪರಿಚಿತರು ಏಕಾಏಕಿ ಫ್ರೂಟ್​​​ ಇರ್ಫಾನ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿ ನಡೆದಿರು ವ ದೃಶ್ಯ ಬಾರ್​​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗುಂಡಿನ ದಾಳಿಯ ಸಿಸಿಟಿವಿ ದೃಶ್ಯ

ಗುಂಡಿನ ದಾಳಿ ನಡೆಸಿದವರು ಯಾರು? ಎಂಬುದು ತಿಳಿದು ಬಂದಿಲ್ಲ. ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ಫ್ರೂಟ್​​ ಇರ್ಫಾನ್​​​ ಮೇಲೆ ರೌಡಿ ಶೀಟ್​​ ಸಹ ಇದ್ದು, ಇದೀಗ ಆತನ ಮೇಲೆ ದಾಳಿ ನಡೆಸಲಾಗಿದೆ. ಘಟನೆಯಿಂದಾಗಿ ಇರ್ಫಾನ್ ತಲೆಗೆ ಗಾಯವಾಗಿದ್ದು, ನಗರದ ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇರ್ಫಾನ್​​ಗೆ ಗುಂಡು ತಗುಲಿದ ಸ್ಥಳ ಪರಿಶೀಲನೆ

ರೌಡಿ ಶೀಟರ್​​​​ ಇತ್ತೀಚಿಗೆ ಪೆರೋಲ್​ ಮೇಲೆ ಜೈಲಿನಿಂದ ಹೊರಬಂದಿದ್ದ ಎನ್ನಲಾಗಿದೆ. ಇನ್ನು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಹಳೇಹುಬ್ಬಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.