ETV Bharat / state

ಪ್ರವಾಹ ಸಮಸ್ಯೆ ಎದುರಿಸಲು ಸಕಲ ಸಿದ್ಧತೆಯಲ್ಲಿ ಅಗ್ನಿಶಾಮಕ ಇಲಾಖೆ - Fire department preparing for flood situation

ಬಿಡದೇ ಸುರಿಯುತ್ತಿರುವ ಮಳೆಯಿಂದ ಹುಬ್ಬಳ್ಳಿಯಲ್ಲಿ ಯಾವ ಸಂದರ್ಭದಲ್ಲಿ ಬೇಕಾದರೂ ಪ್ರವಾಹದಂತಹ ಪರಿಸ್ಥಿತಿಗಳು ಎದುರಾಗುವ ಅಪಾಯವಿದೆ. ಈ ಹಿನ್ನೆಲೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಾರ್ವಜನಿಕರ ಸೇವೆಗೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸನ್ನದ್ಧವಾಗಿದೆ.

Fire department ready to face flood
ಸಕಲ ಸಿದ್ಧತೆಯಲ್ಲಿ ಅಗ್ನಿಶಾಮಕ ಇಲಾಖೆ
author img

By

Published : Jul 17, 2021, 11:12 AM IST

ಹುಬ್ಬಳ್ಳಿ: ಕಳೆದ ವರ್ಷ ಮಳೆರಾಯನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡು, ಪ್ರವಾಹದಿಂದಾಗಿ ಜನರ ಬದುಕು ಮುರಾಬಟ್ಟೆಯಾಗಿತ್ತು. ಆದರೆ ಈ ಬಾರಿ ಮಾತ್ರ ಹಾಗಾಗಬಾರದು ಎಂದು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸಾರ್ವಜನಿಕರ ಸೇವೆಗೆ ತಕ್ಷಣವೇ ಮುಂದಾಗಲು ಎಲ್ಲಾ ಸಿದ್ಧತೆ ನಡೆಸಿಕೊಂಡಿದೆ.

ಸಕಲ ಸಿದ್ಧತೆಯಲ್ಲಿ ಅಗ್ನಿಶಾಮಕ ಇಲಾಖೆ

ಉತ್ತರ ಕರ್ನಾಟಕ ಭಾಗದಲ್ಲಿ ಕಣ್ಣೀರು ತರಿಸಿದ್ದ ಪ್ರವಾಹ ಇಲ್ಲಿನ ಜನರ ಬದುಕಿನಲ್ಲಿ ಅಕ್ಷರಶಃ ಸಂಕಷ್ಟವನ್ನುಂಟು ಮಾಡಿತ್ತು. ಸುಮಾರು ಎರಡು ಮೂರು ತಿಂಗಳು ಸುರಿದ ಮಳೆಯಿಂದ ಜನರು ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾಗಿತ್ತು. ಪ್ಯಾರಾ ಮಿಲಿಟರಿ, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಸಹ ಸಾಕಷ್ಟು ಶ್ರಮವಹಿಸಿ ಜನರ ರಕ್ಷಣೆ ಮಾಡುವಲ್ಲಿ ಶತಾಯ ಗತಾಯ ಹೋರಾಟ ನಡೆಸಿದ್ದರು.

ಕಳೆದ ವರ್ಷ ಪ್ರವಾಹದ ಬಗ್ಗೆ ಅರಿವಿಲ್ಲದೇ ಯಾವುದೇ ಸಿದ್ಧತೆಗಳಿಲ್ಲದೇ ತರಾತುರಿಯಲ್ಲಿ ಕಾರ್ಯಾಚರಣೆ ನಡೆಸುವಂತಾಗಿತ್ತು. ಆದರೆ ಈ ಬಾರಿ ಹಾಗಾಗಬಾರದೆಂಬ ಉದ್ದೇಶದಿಂದ ಧಾರವಾಡ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯು ಈಗಾಗಲೇ ಎಲ್ಲ ರೀತಿಯ ಸಿದ್ಧತೆ ನಡೆಸಿಕೊಳ್ಳುತ್ತಿದೆ.

ಕಳೆದ ವರ್ಷ ಮಳೆಯ ಪ್ರಮಾಣ ಹೆಚ್ಚಾಗಿ ಜಲ ಪ್ರವಾಹ ಸಂಭವಿಸಿದ ಬೆನ್ನಲ್ಲೇ ಹುಬ್ಬಳ್ಳಿಯ ಅಮರಗೋಳದಲ್ಲಿರುವ ಅಗ್ನಿಶಾಮಕ ಘಟಕ ಸಾಕಷ್ಟು ಉಪಕರಣಗಳ ಸಮಸ್ಯೆ ಅನುಭವಿಸಿತ್ತು. ಆದರೆ ಈಗ ಜಿಲ್ಲಾಡಳಿತ ಲೈಫ್​​ ಜಾಕೆಟ್, ರೇನ್ ಕೋಟ್ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿದೆ. ಅಲ್ಲದೇ ಹುಬ್ಬಳ್ಳಿ ಉಣಕಲ್ ಕೆರೆಯಲ್ಲಿ ಸತತ ಎರಡು ತಿಂಗಳ ಕಾಲ ಸಿಬ್ಬಂದಿಗೆ ತರಬೇತಿಯನ್ನು ಕೂಡ ನೀಡಿದ್ದು, ಯಾವುದೇ ಸಂದರ್ಭದಲ್ಲೂ ನಾವು ಕಾರ್ಯಾಚರಣೆಗೆ ಸಿದ್ಧ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.