ಹುಬ್ಬಳ್ಳಿ : ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಯಾದ ಹಿನ್ನೆಲೆ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ನಗರದ ಚೆನ್ನಮ್ಮ ಸರ್ಕಲ್‌ನಲ್ಲಿ ಪಾಲಿಕೆ ಅಧಿಕಾರಿಗಳು ತಮ್ಮ ಜೀಪ್ನಲ್ಲಿ ಸಾಮಾಜಿಕ ಅಂತರ ಕಾಪಾಡದೇ ತೆರಳುತ್ತಿದ್ದಾಗ ಉಪನಗರ ಪೊಲೀಸರು ದಂಡ ಹಾಕಿ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ಅಟ್ಟಹಾಸ ನಡುವೆಯೂ ಪೊಲೀಸರು ಸೂಕ್ತ ಕ್ರಮ ಕೈಗೊಂಡು, ನಿಯಮ ಉಲ್ಲಂಘಿಸಿದವರಿಗೆ ಯಾವುದೇ ಮುಲಾಜಿಲ್ಲದೇ ದಂಡ ಹಾಕುತ್ತಿದ್ದಾರೆ.
ಅದರಂತೆ ಇಂದು ಉಪನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವೀಂದ್ರ ಬಡಫಕೀರಪ್ಪನವರ ಹಾಗೂ ಸಿಬ್ಬಂದಿ ನಿಯಮ ಉಲ್ಲಂಘಿಸಿದ ಪಾಲಿಕೆ ಅಧಿಕಾರಿಗಳಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ.
ಇದನ್ನೂ ಓದಿ: 'ಶಾಸಕರ ನಿಧಿಯಿಂದ 100 ಕೋಟಿ ಮೊತ್ತದ ಲಸಿಕೆ ತರಿಸಲು ಕಾಂಗ್ರೆಸ್ಗೆ ಸಹಕರಿಸಿ'