ಹುಬ್ಬಳ್ಳಿ: ನಿನ್ನೆಯಷ್ಟೇ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಟೆಕ್ಕಿ ಸಂದೀಪ್ ಖ್ಯಾತಸಂದ್ರ ಅವರ ರಕ್ತದ ಮಾದರಿ ವರದಿ ಕಿಮ್ಸ್ ವೈದ್ಯರ ಕೈಸೇರಿದ್ದು, ಅದರಲ್ಲಿ ನೆಗೆಟಿವ್ ಅಂತಾ ಬಂದಿದೆ.
ಚೀನಾದಿಂದ ಆಗಮಿಸಿದ ನಂತರ ಸಂದೀಪ್ ಅವರಿಗೆ ಅನಾರೋಗ್ಯ ಕಾಡಿತ್ತು. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಇರುವ ಶಂಕೆ ವ್ಯಕ್ತವಾಗಿದ್ದಕ್ಕೆ ಅವರನ್ನು ನಗರದ ಕಿಮ್ಸ್ಗೆ ಸೇರಿಸಲಾಗಿದೆ. ಬಳಿಕ ಅವರ ರಕ್ತದ ಮಾದರಿಯನ್ನು ತಪಾಸಣೆಗೆಂದು ಪುಣೆಗೆ ಕಳಿಸಲಾಗಿತ್ತು.
ಅಲ್ಲದೆ ಸಂದೀಪ್ ಅವರಿಗೆ ಕೊರೊನಾ ವೈರಸ್ ತಗುಲಿಲ್ಲ ಎನ್ನುವುದು ಸಂದೀಪ್ ಕುಟುಂಬಸ್ಥರು ಸೇರಿದಂತೆ ವಾಣಿಜ್ಯ ನಗರಿಯ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ರಕ್ತದ ತಪಾಸಣಾ ವರದಿಯಲ್ಲಿ ಕೊರೊನಾ ಲಕ್ಷಣಗಳು ಇಲ್ಲವೆಂದು "ನೆಗೆಟಿವ್" ಫಲಿತಾಂಶ ಬಂದಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಕಿಮ್ಸ್ ಅಧೀಕ್ಷಕ ಡಾ.ಅರುಣಕುಮಾರ್ ಮಾಹಿತಿ ನೀಡಿದ್ದಾರೆ.
ಚೀನಾದಿಂದ ವಾಪಸ್ ಸ್ವದೇಶಕ್ಕೆ ಜ.18 ಕ್ಕೆ ಆಗಮಿಸಿದ್ದ ಸಂದೀಪ್ ಅವರಿಗೆ ಭಾನುವಾರ ಕೆಮ್ಮು ಜ್ವರ ಬಂದ ಹಿನ್ನಲೆ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.