ETV Bharat / state

ಹೋಟೆಲ್ ಬಂದ್ ಮಾಡಿಸಿದ ಪೊಲೀಸರು: ಊಟ ಸಿಕ್ಕಿಲ್ಲವೆಂದು ರಾತ್ರೋರಾತ್ರಿ ಪ್ರತಿಭಟನೆಗಿಳಿದ ರೈತರು - ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆ

ಮೆಣಸಿನಕಾಯಿ ಮಾರಾಟಕ್ಕೆ ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆ ಹಾಗೂ ಬೇರೆ ಬೇರೆ ಊರುಗಳಿಂದ ಹುಬ್ಬಳ್ಳಿಗೆ ಬಂದಿದ್ದ ರೈತರಿಗೆ ರಾತ್ರಿ ಊಟ ಸಿಕ್ಕಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ರೈತರ ಪ್ರತಿಭಟನೆ
ರೈತರ ಪ್ರತಿಭಟನೆ
author img

By

Published : Jan 21, 2022, 9:23 AM IST

ಹುಬ್ಬಳ್ಳಿ: ಪೊಲೀಸರು ಬೇಗ ಹೋಟೆಲ್​ಗಳನ್ನು ಬಂದ್ ಮಾಡಿಸಿದ್ದರಿಂದ ಊಟ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ನೂರಾರು ರೈತರು ಇಲ್ಲಿನ ಎಪಿಎಂಸಿ ಎದುರು ಹು - ಧಾ ಮುಖ್ಯ ರಸ್ತೆ ಹಾಗೂ ಬಿಆರ್​ಟಿಎಸ್ ರಸ್ತೆ ಬಂದ್ ಮಾಡಿ ತಡರಾತ್ರಿ ಪ್ರತಿಭಟನೆ ನಡೆಸಿದರು.

ಮೆಣಸಿನಕಾಯಿ ಮಾರಾಟಕ್ಕೆ ಧಾರವಾಡ ಸೇರಿದಂತೆ ಗದಗ, ಬಾಗಲಕೋಟೆ ಜಿಲ್ಲೆ ಹಾಗೂ ಬೇರೆ ಬೇರೆ ಊರುಗಳಿಂದ ರೈತರು ಬಂದಿದ್ದರು. ಮೆಣಸಿನಕಾಯಿ ತೂಕ ಆಗುವ ಒಳಗೆ ಪೊಲೀಸರು ಎಲ್ಲ ಹೋಟೆಲ್​ಗಳನ್ನು ಬಂದ್ ಮಾಡಿಸಿದ್ದಾರೆ. ಹೀಗಾಗಿ, ಇಲ್ಲಿ ವಾಸ್ತವ್ಯ ಹೂಡಿರುವ ನಮಗೆ ರಾತ್ರಿ ಊಟ ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ, ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.

ಸ್ಥಳಕ್ಕೆ ಎಸಿಪಿ ವಿನೋದ್​ ಮುಕ್ತೇದಾರ ಹಾಗೂ ಎಪಿಎಂಸಿ ನವನಗರ ಠಾಣೆ ಇನ್ಸ್​ಪೆಕ್ಟರ್ ಮತ್ತು ಸಿಬ್ಬಂದಿ ತೆರಳಿ ಪತ್ರಿಭಟನಾನಿರತ ರೈತರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು. ಜೊತೆಗೆ ಅವರಿಗೆ ಎಪಿಎಂಸಿಯಲ್ಲಿಯೇ ಊಟದ ವ್ಯವಸ್ಥೆ ಮಾಡಿಸಿದರು.

ಗುರುವಾರ ಒಂದೇ ದಿನ ಇಲ್ಲಿನ ಎಪಿಎಂಸಿಗೆ 42ಸಾವಿರ ಚೀಲ ಮೆಣಸಿನಕಾಯಿ ಆವಕವಾಗಿದೆ. ಬೆಳಗ್ಗೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ರೈತರು ಮೆಣಸಿನಕಾಯಿ ತಂದಿದ್ದರಿಂದ ವ್ಯಾಪಾರಸ್ಥರು ಮೆಣಸಿನ ಕಾಯಿ ಇಳಿಸಿಕೊಳ್ಳಲು ಸ್ಥಳವಿಲ್ಲವೆಂದು ನಿರಾಕರಿಸಿದ್ದರು. ಆಗಲೂ ರೈತರು ಎಪಿಎಂಸಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು.

ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಾಪಾರಸ್ಥರ ಮನವೊಲಿಸಿ, ರೈತರು ತಂದಿದ್ದ ಮೆಣಸಿನಕಾಯಿ ಇಳಿಸಿಕೊಳ್ಳುವ ವ್ಯವಸ್ಥೆ ಮಾಡಿಸಿದ್ದರು. ಆದರೆ ರಾತ್ರಿ ಮತ್ತೆ ತಮಗೆ ಊಟ ಸಿಕ್ಕಿಲ್ಲವೆಂದು ರೈತರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.