ETV Bharat / state

ಲಾಕ್​ಡೌನ್ ವೇಳೆಯೂ ನಾದ ಮೊಳಗಿಸಿದ ಸಿದ್ದಾರೂಢರ ತಂಬೂರಿ‌ ಸ್ವರ - ಇತಿಹಾಸ ಹೊಂದಿರುವ ತಂಬೂರಿ

ಹುಬ್ಬಳ್ಳಿಯ ಸಿದ್ದಾರೂಢರ ಮಠದಲ್ಲಿ ನಾದ ಸೂಸುವ ತಂಬೂರಿಯನ್ನು 12 ಜನ ಸಾಧುಗಳು 24 ಗಂಟೆಗಳ ಕಾಲವೂ ನುಡಿಸುತ್ತಾರೆ.

Hubli
ಸಿದ್ದಾರೂಢರ ತಂಬೂರಿ‌ ಸ್ವರ
author img

By

Published : Jun 8, 2020, 2:59 PM IST

ಹುಬ್ಬಳ್ಳಿ: ಜಿಲ್ಲೆಯ ಸಿದ್ದಾರೂಢ ಮಠದಲ್ಲಿ ನಾದ ಸೂಸುವ ತಂಬೂರಿ ಕಳೆದ 92 ವರ್ಷಗಳಿಂದ ನೆಲವನ್ನೇ ಸ್ಪರ್ಶಿಸಿಲ್ಲ. ಲಾಕ್​ಡೌನ್ ಸಂದರ್ಭದಲ್ಲಿಯೂ ಕೂಡ ನಿತ್ಯ ಪೂಜೆ ಪುನಸ್ಕಾರಗಳ ಮೂಲಕ ತಂಬೂರಿ ನಾದ ಮೊಳಗುತ್ತಲೇ ಇದೆ.

tamburi
ಐತಿಹಾಸಿಕ ಸಿದ್ದಾರೂಢರ ತಂಬೂರಿ‌

ಒಟ್ಟು 12 ಜನ ಸಾಧುಗಳು ಈ ತಂಬೂರಿಯನ್ನು 24 ಗಂಟೆಗಳ ಕಾಲವೂ ನುಡಿಸುತ್ತಾರೆ. ಈ ತಂಬೂರಿಯನ್ನು ಪ್ರತಿಯೊಬ್ಬರು ಎರಡು ಗಂಟೆಗಳ ಕಾಲ ಒಬ್ಬರು ಪಾಳೆಯ ಮೂಲಕ ಭಜನೆ ಮಾಡುತ್ತ ತಂಬೂರಿ ನುಡಿಸಿ, ಕೆಳಗೆ ಇಡದೇ ಪುರಾತನ ಪದ್ಧತಿಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀ ಸಿದ್ದಾರೂಢ ಸ್ವಾಮೀಜಿ ಬ್ರಹ್ಮೈಕ್ಯ ಆಗುವ ಮುನ್ನ ಮಠಕ್ಕೆ ಈ ತಂಬೂರಿಯನ್ನು ನೀಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಓಂ ನಮಃ ಶಿವಾಯ ಅನ್ನುವ ಮಂತ್ರದ ಮೂಲಕ ನಿತ್ಯ ಇದನ್ನು ಬಾರಿಸುತ್ತ ಭಕ್ತಿ ಸಮರ್ಪಿಸುತ್ತಿದ್ದಾರೆ.

12 ಜನ ಸಾಧುಗಳು ಈ ತಂಬೂರಿಯನ್ನು 24 ಗಂಟೆಗಳ ಕಾಲವೂ ನುಡಿಸುತ್ತಾರೆ.

ಇನ್ನು ಕೆಳಗೆ ಸಹ ತಂಬೂರಿಯನ್ನು ಇಡದೇ ಪ್ರತಿ ಗಂಟೆಗೂ ಒಬ್ಬೊಬ್ಬರು ಅದನ್ನು ಪೂಜ್ಯ ಭಾವನೆಯಿಂದ ಮೈಮೇಲೆ ಧರಿಸಿ ನುಡಿಸುತ್ತಾರೆ. ಸಿದ್ದಾರೂಢರು ನುಡಿಸಿದ ಈ ತಂಬೂರಿಯನ್ನು ಅಷ್ಟೇ ಪಾವಿತ್ರ್ಯತೆ ಮೂಲಕ ನೆಲಕ್ಕೆ ಮುಟ್ಟಿಸದೇ ದೈವೀ ಸ್ವರೂಪದಂತೆ ಕಾಣುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.