ETV Bharat / state

ಪರಿಸರ ಸಂರಕ್ಷಣೆಗೆ ನೈಋತ್ಯ ರೈಲ್ವೆ ಬಹುದೊಡ್ಡ ಕೊಡುಗೆ: 2023ಕ್ಕೆ ಸಂಪೂರ್ಣ ಎಲೆಕ್ಟ್ರಿಕ್ ಟ್ರೈನ್ ರನ್ - South Western Railway zone

ಪರಿಸರ ಸಂರಕ್ಷಣೆಗೆ ನೈಋತ್ಯ ರೈಲ್ವೆ ಬಹುದೊಡ್ಡ ಕೊಡುಗೆ ನೀಡಲು ಮುಂದಾಗಿದ್ದು, 2023 ಮಾರ್ಚ್ ಅಂತ್ಯದೊಳಗೆ ನೈಋತ್ಯ ರೈಲ್ವೆ ಸಂಪೂರ್ಣ ವಿದ್ಯುತ್ ಚಾಲಿತ ರೈಲುಗಳಾಗಿ ಪರಿವರ್ತನೆಗೊಳ್ಳಲಿದ್ದು, ಸಂಪೂರ್ಣ ಎಲೆಕ್ಟ್ರಿಕ್ ರೈಲುಗಳು ಸಂಚಾರ ನಡೆಸಲಿವೆ.

electric train to run from 2023
2023ಕ್ಕೆ ಸಂಪೂರ್ಣ ಎಲೆಕ್ಟ್ರಿಕ್ ಟ್ರೈನ್
author img

By

Published : Oct 12, 2021, 9:15 PM IST

ಹುಬ್ಬಳ್ಳಿ: ಪ್ರಯಾಣಿಕರಿಗೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಹೆಸರುವಾಸಿಯಾಗಿರುವ ನೈಋತ್ಯ ರೈಲ್ವೆ ಈಗ ಮತ್ತಷ್ಟು ಆಧುನೀಕರಣದತ್ತ ಹೆಜ್ಜೆ ಹಾಕುತ್ತಿದೆ. ಪ್ರಯಾಣಿಕರಿಗೆ ಸಮಯದ ಉಪಯೋಗ ಹಾಗೂ ಪರಿಸರ ಮಾಲಿನ್ಯ ತಡೆ ನಿಟ್ಟಿನಲ್ಲಿ ಎಲೆಕ್ಟ್ರಿಕ್ ರೈಲು ಓಡಿಸುವ ಕಾರ್ಯ ವೇಗ ಪಡೆದುಕೊಳ್ಳುತ್ತಿದೆ‌.

2023ಕ್ಕೆ ಸಂಪೂರ್ಣ ಎಲೆಕ್ಟ್ರಿಕ್ ಟ್ರೈನ್

ಇಷ್ಟುದಿನ ಡೀಸೆಲ್​​ ಮೂಲಕ ಚಲಿಸುತ್ತಿದ್ದ ರೈಲುಗಳು ಇನ್ನುಮುಂದೆ ಸಂಪೂರ್ಣ ವಿದ್ಯುತ್ ಚಾಲಿತ ರೈಲುಗಳಾಗಿ ಪರಿವರ್ತನೆ ಆಗುವ ಮೂಲಕ ಪರಿಸರ ಸಂರಕ್ಷಣೆ ಪ್ರಮುಖ ಪಾತ್ರ ವಹಿಸಲಿವೆ. ಈಗಾಗಲೇ ಎಲೆಕ್ಟ್ರಿಕ್ ಕಾಮಗಾರಿ ಚುರುಕುಗೊಂಡಿದ್ದು, 2023 ಮಾರ್ಚ್ ಅಂತ್ಯದೊಳಗೆ ನೈಋತ್ಯ ರೈಲ್ವೆ ಸಂಪೂರ್ಣ ವಿದ್ಯುತ್ ಚಾಲಿತ ರೈಲುಗಳಾಗಿ ಪರಿವರ್ತನೆಗೊಳ್ಳಲಿದ್ದು, ಇದರಿಂದ ಇಂಧನದ ಬಹುದೊಡ್ಡ ಆರ್ಥಿಕ ಹೊರೆ ನೈಋತ್ಯ ರೈಲ್ವೆಗೆ ತಪ್ಪಲಿದೆ.

ಈಗಾಗಲೇ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಎಕ್ಸ್‌ಪ್ರೆಸ್‌, ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಹಾಗೂ ಹಲವಾರು ಯೋಜನೆ ಹಾಗೂ ಜನಪರ ಕಾರ್ಯದ ಮೂಲಕ ಜನರಿಗೆ ಉತ್ಕೃಷ್ಟ ಮಟ್ಟದ ಸಾರಿಗೆ ಸೇವೆಯನ್ನು ನೀಡುತ್ತ ಬಂದಿರುವ ರೈಲ್ವೆ, 2023ರ ಹೊತ್ತಿಗೆ ಜೀರೋ ಕಾರ್ಬನ್ ಎಮಿಟರ್ ಚಿಂತನೆಯನ್ನು ನಡೆಸಿದ್ದು, ಪರಿಸರ ಸಂರಕ್ಷಣೆ ಬಹುದೊಡ್ಡ ಹೊಣೆಯನ್ನು ನೈಋತ್ಯ ರೈಲ್ವೆ ಹೊಂದಿದ್ದು, ಅದಕ್ಕೆ ತಕ್ಕನಾಗಿ ಕಾರ್ಯವೈಖರಿಯನ್ನು ಮೈಗೂಡಿಸಿಕೊಂಡಿದೆ.

ಒಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಈಗಾಗಲೇ ಎಲೆಕ್ಟ್ರಿಕ್ ರೈಲುಗಳು ಸಿದ್ಧವಾಗುತ್ತಿವೆ. ಅಲ್ಲದೇ ಎಲೆಕ್ಟ್ರಿಕ್ ಕಾಮಗಾರಿ ಕೂಡ ಪೂರ್ಣಗೊಳ್ಳುವ ಹಂತದಲ್ಲಿವೆ. ಈ ನಿಟ್ಟಿನಲ್ಲಿ ಕೂಡಲೇ ಎಲೆಕ್ಟ್ರಿಕ್ ಕಾಮಗಾರಿ ಪೂರ್ಣಗೊಂಡು ಭಾರತೀಯ ರೈಲ್ವೆಯ ಪರಿಸರ ಸಂರಕ್ಷಣೆ ಕನಸು ನನಸು ಮಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.