ಹುಬ್ಬಳ್ಳಿ: ಫೆಬ್ರವರಿ 8 ರಿಂದ 10 ರವರೆಗೆ ಮೂರು ಸಾವಿರ ಮಠದ ಆವರಣದಲ್ಲಿ, ಒಣ ಮೆಣಸಿನಕಾಯಿ ಮೇಳ ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ದಿ ಮಂಡಳದ ವ್ಯವಸ್ಥಾಪಕ ನಿರ್ದೇಶಕ ಚಿದಾನಂದಪ್ಪ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಒಣಮೆಣಸಿನಕಾಯಿ ನೇರ ಮಾರಾಟ ಪ್ರೋತ್ಸಾಹ, ಬೆಳೆಗಾರರ ಹಾಗೂ ಗ್ರಾಹಕರ ಮಧ್ಯೆ ಸಂಪರ್ಕ ಕಲ್ಪಿಸುವುದು, ಬೆಳೆಗಾರರು ಗ್ರಾಹಕರ, ವಿಜ್ಞಾನಿಗಳ ಮತ್ತು ಸಂಸ್ಕರಣದಾರರನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ ಈ ಮೇಳವನ್ನು ಆಯೋಜನೆ ಮಾಡಲಾಗಿದೆ ಎಂದರು.
ಮೇಳದಲ್ಲಿ ಸುಮಾರು 100ಕ್ಕೂ ಹೆಚ್ಚು ಮಳಿಗೆ ಸ್ಥಾಪಿಸಲಾಗಿದ್ದು, ಬ್ಯಾಡಗಿ, ಡಬ್ಬಿ, ಅಣ್ಣಿಗೇರಿ, ಗುಂಟೂರು, ಕಡ್ಡಿ ಸೇರಿದಂತೆ ವಿವಿಧ ತಳಿಯ ಮೆಣಸಿನಕಾಯಿಗಳನ್ನು ಮೇಳದಲ್ಲಿ ಮಾರಾಟವಾಗಿವೆ ಎಂದರು.