ಹುಬ್ಬಳ್ಳಿ: ರಾಜ್ಯದ ಜನರಿಗೆ ಬಿಜೆಪಿ ಸರ್ಕಾರದಿಂದ ಒಳ್ಳೆಯದಾಗಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಈವರೆಗೆ ಮಹದಾಯಿ ಹಾಗೂ ಮೇಕೆದಾಟು ಯೋಜನೆಗಳ ಬಗ್ಗೆ ಚಕಾರ ಎತ್ತಿಲ್ಲ. ಅವರ ಬಗ್ಗೆ ಒಳ್ಳೆಯ ನಿರೀಕ್ಷೆ ಇತ್ತು, ಆದರೆ ಈವರೆಗೆ ಅದರ ಬಗ್ಗೆ ಯಾರೂ ಚಕಾರ ಎತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಉಪಚುನಾವಣೆಗಳು ಮುಂದಿನ ಚುನಾವಣೆಯ ದಿಕ್ಸೂಚಿ ಅಂತಾ ಹೇಳೋಕಾಗಲ್ಲ. ಬೈಎಲೆಕ್ಷನ್ ಅನ್ನುವುದು ಈ ಹಿಂದೆ ಆಗಿರುವ ನೋವನ್ನ ಹೇಳಿಕೊಳ್ಳೋಕೆ ಮತದಾರರಿಗೆ ಅವಕಾಶ. ಆಡಳಿತ ಯಂತ್ರವೂ ಕೂಡ ಬಹಳ ಬಿಗಿಯಾಗಿದೆ. ಬಿಜೆಪಿಯವರಿಗೆ ಅದು ಚೆನ್ನಾಗಿ ಗೊತ್ತಿದೆ. ಆಡಳಿತ ಯಾವುದೇ ರೀತಿ ದುರುಪಯೋಗ ಮಾಡಿಕೊಂಡರೂ ಮತದಾರರ ತೀರ್ಪು ಅಂತಿಮ ಆಗಿರುತ್ತೆ ಎಂದರು.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ಸಿಂಗ್ ನಮ್ಮ ನಾಯಕರು ಪ್ರಾಮಾಣಿಕರು ಎಂದು ಹೇಳಿದ್ದರು. ಆದರೆ ಯತ್ನಾಳ್, ಬೆಲ್ಲದ್ ಅವರು ಪರೀಕ್ಷೆ ಪಾಸ್ ಮಾಡೋಕೆ ಓಡಾಡುತ್ತಿದ್ರು. ಬಿಜೆಪಿಯವರ ಯಾವುದೇ ಮಾತುಗಳಲ್ಲಿಯೂ ನಂಬಿಕೆ ಇಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದರು.
ಬಳಿಕ ಹುಬ್ಬಳ್ಳಿಯ ಹೊಸೂರು ಬಳಿಯ ಗಾಳಿ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಮರಳಿದರು.
ಇದನ್ನೂ ಓದಿ: ಸಂಘದ ಬಗ್ಗೆ ಅನುಮಾನವಿದ್ದರೆ ದೇವೇಗೌಡರ ಬಳಿ ವಿಚಾರಿಸಲಿ: ಹೆಚ್‌ಡಿಕೆಗೆ ಸಿ.ಟಿ.ರವಿ ಟಾಂಗ್