ETV Bharat / state

ಡಿಕೆ ಶಿವಕುಮಾರ ರಕ್ತ ಯಾರ ಉಪಯೋಗಕ್ಕೂ ಬರಲ್ಲ: ಸಿಎಂ ಬೊಮ್ಮಾಯಿ ಟಾಂಗ್ - ಸಿಎಂ ಬೊಮ್ಮಾಯಿ

ನಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು, ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಖಚಿತ ಎನ್ನುತ್ತಿದ್ದಾರೆ ಸಿಎಂ ಬೊಮ್ಮಾಯಿ.

CM Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Apr 27, 2023, 12:37 PM IST

Updated : Apr 27, 2023, 4:48 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರ ರಕ್ತ ಯಾರ ಉಪಯೋಗಕ್ಕೂ ಬರಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು‌ ನಿಶ್ಚಿತ.‌ ರಕ್ತದಲ್ಲಿ ಬರೆದು ಕೊಡುವುದಾಗಿ ಡಿ ಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಸಿಎಂ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.

ಮೋದಿ ಸಂವಾದದ ಬಳಿಕ ಮಾತನಾಡಿದ ಅವರು, ನಮ್ಮ ನೆಚ್ಚಿನ ಪ್ರಧಾನಿಯವರು ಕಾರ್ಯಕರ್ತರ ಜೊತೆಗೆ ಸುದೀರ್ಘ ಸಂವಾದ ಮಾಡಿದ್ದಾರೆ. ಸಂವಾದದಲ್ಲಿ ಹಲವಾರು ವಿಚಾರ ಹೇಳಿದ್ದಾರೆ. ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮತ್ತು ಬೂತ್ ಮಟ್ಟದ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ನಮ್ಮ ಡಬಲ್ ಎಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಬದ್ಧವಾಗಿದೆ. ನಮ್ಮ ಅವಧಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎಂದರು.

ಹಲವಾರು ವಲಯಗಳಲ್ಲಿ ನಾವು ಅಭಿವೃದ್ಧಿ ಸಾಧಿಸಿದ್ದೇವೆ. ಮೋದಿ ಅವರು ಹತ್ತು ಹಲವಾರು ಮಾರ್ಗದರ್ಶನ ಮಾಡಿದ್ದಾರೆ. ಮೋದಿಯವರ ಮಾರ್ಗದರ್ಶನದ ಅಂಶಗಳನ್ನು ಹಿಡಿದುಕೊಂಡು ರಾಜ್ಯ ಜನತೆ ಮುಂದೆ ಹೋಗುತ್ತೇವೆ. ರಾಜ್ಯದ ಜನತೆ ನಮಗೆ ಸಂಪೂರ್ಣ ಬಹುಮತ ನೀಡುವ ವಿಶ್ವಾಸವಿದೆ. ಅವರ ಅಪೇಕ್ಷೆಯನ್ನು ನಾವು ನೇರವೇರಿಸುತ್ತೇವೆ. ಚುನಾವಣಾ ರಣತಂತ್ರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿದೆ.

ಇನ್ನು ಎರಡು ಮೂರು ದಿನಗಳಲ್ಲಿ ರಾಜ್ಯದ ಚುನಾವಣಾ ಚಿತ್ರಣ ಬದಲಾಗಲಿದೆ. ಚುನಾವಣೆಯಲ್ಲಿ ಜನರಿಗೆ ಮೋಸ ಮಾಡುವ ತಂತ್ರ ಕಾಂಗ್ರೆಸ್ ಗ್ಯಾರೆಂಟಿ ಸ್ಕೀಮ್. ಕಳೆದ ಐದು ವರ್ಷಗಳಲ್ಲಿ ಮಾಡಿರುವಂತಹ ಮೂಲಸೌಕರ್ಯಗಳ ಅಭಿವೃದ್ಧಿ ವರದಿಯನ್ನು ಕೊಟ್ಟಿದ್ದೇವೆ. 150 ಸ್ಥಾನ ಯಾರಿಗೆ ಕೊಡಬೇಕು ಅನ್ನೋದು ಜನ ತೀರ್ಮಾನ ಮಾಡ್ತಾರೆ. ನಮಗೆ ಜನರ ಮೇಲೆ ವಿಶ್ವಾಸ ಇದೆ. ಖಂಡಿತಾ ಅಧಿಕಾರಕ್ಕೆ ಬರುತ್ತೇವೆ ಎಂದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಮಾತ್ರ ಲಿಂಗಾಯತರು ಮುಖ್ಯಮಂತ್ರಿಯಾಗಲು ಸಾಧ್ಯ: ನಳೀನ್ ಕುಮಾರ್ ಕಟೀಲ್

Last Updated : Apr 27, 2023, 4:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.