ETV Bharat / state

ಅಲೆಮಾರಿ ಕಲಾವಿದರ ಕಷ್ಟಕ್ಕೆ ಸ್ಪಂದಿಸಿದ ಸೋಮನಗೌಡ ಪಾಟೀಲ್​​ ಗೆಳೆಯರ ಬಳಗ - poor artists

ಅಲೆಮಾರಿ ಸೇರಿದಂತೆ ಸಾವಿರಾರು ಕಲಾವಿದರ ಬದುಕು ದುಸ್ತರವಾಗಿದೆ. ಈ ಹಿನ್ನೆಲೆ ಸಂಕಷ್ಟದಲ್ಲಿರುವ ಕಲಾವಿದರಿಗೆ ಕೈಲಾದ ಸಹಾಯ ಮಾಡಲಾಗಿದ್ದು, ಸರ್ಕಾರ ಕೂಡ ಇವರ ಬಗ್ಗೆ ಗಮನ ಹರಿಸಿ ಸಮಸ್ಯೆಗೆ ಸಹಕರಿಸಬೇಕು.

Distribution of grocery kit to poor artists
ಬಡ ಕಲಾವಿದರಿಗೆ ದಿನಸಿ ಕಿಟ್ ವಿತರಣೆ
author img

By

Published : Oct 7, 2020, 7:59 PM IST

ಹುಬ್ಬಳ್ಳಿ : ಸೋಮನಗೌಡ ಗೆಳೆಯರ ಬಳಗದಿಂದ ಬಡ ಕಲಾವಿದರಿಗೆ ಇಂದು ದಿನಸಿ ಕಿಟ್ ವಿತರಣೆ ಮಾಡಲಾಯಿತು.

Distribution of grocery kit to poor artists
ದಿನಸಿ ಕಿಟ್ ವಿತರಣೆ ಮಾಡುತ್ತಿರುವ ಸೋಮನಗೌಡ ಪಾಟೀಲ್

ಕೊರೊನಾ ಎಫೆಕ್ಟ್​ನಿಂದ ಜಾನಪದ ಕಲಾವಿದರ ಪರದಾಟ; ಕಾರ್ಯಕ್ರಮ ಆಯೋಜಿಸುವಂತೆ ಸರ್ಕಾರಕ್ಕೆ ಮೊರೆ ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ಕಳೆದ ವಾರದ ಹಿಂದೆ ಕಲಾವಿದರ ಸಂಕಷ್ಟ ಕುರಿತು ವರದಿ ಪ್ರಕಟಿಸಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಅಮರಗೋಳದ ಸೋಮನಗೌಡ ಗೆಳೆಯರ ಬಳಗ ಸದಸ್ಯರು ಸ್ಥಳಕ್ಕೆ ಆಗಮಿಸಿ ಬಡ ಕಲಾವಿದರಿಗೆ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಸಂಕಷ್ಟಕ್ಕೆ ನೆರವಾಗಿದ್ದಾರೆ.

ಆಹಾರ ಕಿಟ್ ವಿತರಿಸಿ ಮಾತನಾಡಿದ ಸೋಮನಗೌಡ ಪಾಟೀಲ್​, ಮಾಧ್ಯಮದಲ್ಲಿ ಕಲಾವಿದರ ಕಷ್ಟಕರ ಸಂಗತಿ ಬಗ್ಗೆ ತಿಳಿದು ಬೇಸರವಾಯಿತು. ಕೊರೊನಾದಿಂದ ಕಲಾವಿದರು ಬೀದಿಗೆ ಬರುವಂತಾಯಿತು. ಅಲೆಮಾರಿ ಸೇರಿದಂತೆ ಸಾವಿರಾರು ಕಲಾವಿದರ ಬದುಕು ದುಸ್ತರವಾಗಿದೆ. ಈ ಹಿನ್ನೆಲೆ ಸಂಕಷ್ಟದಲ್ಲಿರುವ ಕಲಾವಿದರಿಗೆ ಕೈಲಾದ ಸಹಾಯ ಮಾಡಲಾಗಿದ್ದು, ಸರ್ಕಾರ ಕೂಡ ಇವರ ಬಗ್ಗೆ ಗಮನ ಹರಿಸಿ ಸಮಸ್ಯೆಗೆ ಸಹಕರಿಸುವಂತೆ ಮನವಿ ಮಾಡಿದರು. ಈ ವೇಳೆ, ಬಸವರಾಜ ದೇವಕ್ಕಿ, ಮಹಾಂತೇಶ್ ವಾಲಿಕಾರ, ಶಿವಕುಮಾರ್ ಶಿರೂರ, ರವಿ ಕಮಡೊಳ್ಳಿ, ಬಸವರಾಜ ಚಳಗೇರ್ ಇದ್ದರು.

ಸೋಮನಗೌಡ ಗೆಳೆಯರ ಬಳಗದ ವತಿಯಿಂದ ಬಡ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.