ETV Bharat / state

ಧಾರವಾಡ: ಸಚಿವೆ ಶಶಿಕಾಲಾ ಜೊಲ್ಲೆಗೆ ಸೇರಿದ ಕೋ - ಆಪರೇಟಿವ್ ಸೊಸೈಟಿಯಲ್ಲಿ ದರೋಡೆ

author img

By

Published : Jan 2, 2023, 4:12 PM IST

ಬೀರೇಶ್ವರ ಕೋಅಪರೇಟಿವ್​ ಸೊಸೈಟಿಯಲ್ಲಿ ದರೋಡೆ - ಪತ್ತೆ ಹಚ್ಚಬಾರದೆಂದು ಸಿಸಿಟಿವಿ ದಾಖಲೆಗೆ ಬೆಂಕಿ - ಶಹರ ಠಾಣೆ ಪೊಲೀಸರಿಂದ ಸ್ಥಳ ಪರಿಶೀಲನೆ.

dharwad-theft-of-cooperative-society-belonging-to-minister-sasikala-jole
ಧಾರವಾಡ: ಸಚಿವೆ ಶಶಿಕಾಲಾ ಜೊಲ್ಲೆಗೆ ಸೇರಿದ ಕೋಆಪರೇಟಿವ್ ಸೊಸೈಟಿಯಲ್ಲಿ ದರೋಡೆ

ಧಾರವಾಡ: ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಸೇರಿದ ಧಾರವಾಡದ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಖದೀಮರು ಕೈಚಳಕ ತೋರಿಸಿದ್ದು, ಸಮಾರು ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ನಗರದ ಕೋರ್ಟ್ ವೃತ್ತದ ಬಳಿ ಇರುವ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಗೆ ಖದೀಮರು ರಾತ್ರಿ ಕನ್ನ ಹಾಕಿದ್ದಾರೆ. ಸೊಸೈಟಿಯಲ್ಲಿದ್ದ ಸುಮಾರು 20 ಲಕ್ಷ ನಗದು ಹಾಗೂ 20 ಲಕ್ಷ ಮೌಲ್ಯದ ಚಿನ್ನಾಭರಣ ಖದೀಮರು ಹೊತ್ತೊಯ್ದಿದ್ದಾರೆ.

ಜಾಣತನ ಉಪಯೋಗಿಸಿದ ಕಳ್ಳರು ತಮ್ಮ ಗುರುತು ಪತ್ತೆಯಾಗಬಾರದು ಎಂದು ಸಿಸಿಟಿವಿ ಹಾಗೂ ಸೊಸೈಟಿಯಲ್ಲಿನ ದಾಖಲೆಗಳನ್ನೂ ಸುಟ್ಟು ಹಾಕಿದ್ದಾರೆ. ಅಲ್ಲದೇ ಸಿಸಿಟಿವಿಯ ಡಿವಿಆರ್‌ ಸಹ ಕದ್ದೊಯ್ದಿದ್ದಾರೆ. ಧಾರವಾಡದ ಶಹರ ಠಾಣೆ ಪೊಲೀಸರು ಹಾಗೂ ಎಸಿಪಿ ವಿಜಯಕುಮಾರ ತಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತರಾಗಿ ರಮಣ್ ಗುಪ್ತಾ ನಿಯೋಜನೆ: ಲಾಬೂರಾಮ್ ವರ್ಗಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.