ಧಾರವಾಡ: ಬೈಕ್ನಿಂದ ಇಳಿಯುವಾಗ ಕಾಲು ತಾಕಿದ್ದಕ್ಕೆ ಪ್ರಶ್ನಿಸಿದ ವ್ಯಕ್ತಿಯಯನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ನಡೆದಿದೆ. ಸಂಗನಗೌಡ ಮುದಿಗೌಡ್ರ (50) ಹತ್ಯೆಯಾದ ವ್ಯಕ್ತಿ. ಬೈಕ್ನಿಂದ ಇಳಿಯುವಾಗ ಕಾಲು ತಾಕಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಸಂಗನಗೌಡಗೆ ಥಳಿಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅದೇ ಗ್ರಾಮದ ಈರಪ್ಪ ಕಿತ್ತಲಿ, ಪಕ್ಕಿರಪ್ಪ ಕಿತ್ತಲಿ, ಬಸವರಾಜ ಕಿತ್ತಲಿ, ಮಂಜುನಾಥ್ ಕಿತ್ತಲಿ, ನಾಗರಾಜ ಕಿತ್ತಲಿ, ಬಸವರಾಜ ಕುರುಗೋವಿನಕೊಪ್ಪ ಹಲ್ಲೆ ಮಾಡಿ ಹತ್ಯೆಗೈದಿರುವ ಆರೋಪಿಗಳಾಗಿದ್ದಾರೆ. ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಪ್ರಾಪ್ತ ವಯಸ್ಸಿನಲ್ಲೇ ಯುವಕನೊಂದಿಗೆ ಮದುವೆ.. ದೇವದುರ್ಗದಲ್ಲಿ ಬಾಲ್ಯವಿವಾಹಕ್ಕೊಳಗಾದ ಬಾಲಕಿ ಗರ್ಭಿಣಿ