ETV Bharat / state

ಧಾರವಾಡ: ಪರಿಹಾರ ಹಣ ನೀಡದ ಹೆದ್ದಾರಿ ಪ್ರಾಧಿಕಾರದ ಕಚೇರಿ ಪೀಠೋಪಕರಣ ಜಪ್ತಿ - ಪರಿಹಾರ ಹಣ ನೀಡದ ಧಾರವಾಡ ಹೆದ್ದಾರಿ ಪ್ರಾಧಿಕಾರ ಕಚೇರಿ ಪೀಠೋಪಕರಣ ಜಪ್ತಿ

ಭೂ ಮಾಲೀಕರು ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ 3,27,88,064 ಹಣ ವಸೂಲಿಗಾಗಿ ಧಾರವಾಡದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಗಳ ವಿರುದ್ಧ ದೂರು ದಾಖಲಾಗಿತ್ತು. ಆದೇಶದ ಪ್ರಕಾರ ಪರಿಹಾರ ಹಣ ನೀಡಲು ಹೆದ್ದಾರಿ ಪ್ರಾಧಿಕಾರ ವಿಫಲವಾಗಿದ್ದರಿಂದ ಜಪ್ತಿ ಮಾಡುವಂತೆ ಆದೇಶಿಸಿತ್ತು.

ಹೆದ್ದಾರಿ ಪ್ರಾಧಿಕಾರ ಕಚೇರಿ ಪೀಠೋಪಕರಣ ಜಪ್ತಿ
ಹೆದ್ದಾರಿ ಪ್ರಾಧಿಕಾರ ಕಚೇರಿ ಪೀಠೋಪಕರಣ ಜಪ್ತಿ
author img

By

Published : Jul 26, 2021, 5:27 PM IST

ಧಾರವಾಡ: ಗದಗ ರಾಷ್ಟ್ರೀಯ ಹೆದ್ದಾರಿ-63 ರಸ್ತೆ ಅಗಲೀಕರಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಂಡು ಹೆಚ್ಚುವರಿ ಪರಿಹಾರ ಹಣ ನೀಡದ ಹಿನ್ನೆಲೆಯಲ್ಲಿ ಧಾರವಾಡದ ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಜಪ್ತಿ ಮಾಡಲಾಯಿತು.

ಹೆದ್ದಾರಿ ಪ್ರಾಧಿಕಾರ ಕಚೇರಿ ಪೀಠೋಪಕರಣ ಜಪ್ತಿ

ಭೂಮಿ ಮಾಲೀಕರಾದ ಮಧುಕೇಶ ಆಲೂರ ಹಾಗೂ ರಾಜೇಶ್ವರಿ ಚನ್ನಬಸಪ್ಪ ಆಲೂರ ಅವರ ಜಮೀನನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು ಹೆದ್ದಾರಿ ಪ್ರಾಧಿಕಾರ 2011-12 ರಲ್ಲಿ 44 ಗುಂಟೆ ಭೂಮಿ ಸ್ವಾಧೀನ ಪಡಿಸಿಕೊಂಡಿತ್ತು. ಕಡಿಮೆ ಪರಿಹಾರ ನೀಡಲಾಗಿದೆ ಎಂದು ಮಧುಕೇಶ, ಗದಗ ಜಿಲ್ಲಾಧಿಕಾರಿಗಳಲ್ಲಿ ಪ್ರಕರಣ ದಾಖಲಿಸಿದ್ದರು.

ಗದಗ ಜಿಲ್ಲಾಧಿಕಾರಗಳು ಪ್ರತಿ ಚದರ ಮೀಟರ್​​ಗೆ ರೂ. 1388 (ರೂ. 129 ಪ್ರತಿ ಚದರ ಅಡಿಗೆ) ಗಳಂತೆ ಪರಿಹಾರ ಹಾಗೂ ಇತರೆ ಸೌಲಭ್ಯಗಳನ್ನು ಸೇರಿಸಿ ಬಡ್ಡಿಸಮೇತ ನೀಡುವಂತೆ ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಹೆದ್ದಾರಿ ಪ್ರಾಧಿಕಾರ ಗದಗ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ನ್ಯಾಯಲಯ ಹೆದ್ದಾರಿ ಪ್ರಾಧಿಕಾರದ ಅರ್ಜಿ ವಜಾಗೊಳಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದಿದೆ.‌

ಹೀಗಾಗಿ ಭೂ ಮಾಲೀಕರು ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ 3,27,88,064 ಹಣ ವಸೂಲಿಗಾಗಿ ಧಾರವಾಡದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಗಳ ವಿರುದ್ಧ, ದೂರು ದಾಖಲಾಗಿತ್ತು. ಆವಾರ್ಡ್ ಪ್ರಕಾರ ಪರಿಹಾರ ಹಣ ನೀಡಲು ಹೆದ್ದಾರಿ ಪ್ರಾಧಿಕಾರ ವಿಫಲವಾಗಿದ್ದರಿಂದ ಜಪ್ತಿ ಮಾಡುವಂತೆ ಆದೇಶಿಸಿತ್ತು. ಆ ಆದೇಶದ ಹಿನ್ನೆಲೆ ಇಂದು ಕಚೇರಿ ಪೀಠೋಪಕರಣಗಳನ್ನು ಭೂ ಮಾಲೀಕರು ಹಾಗೂ ವಕೀಲರ ನೇತೃತ್ವದಲ್ಲಿ ಜಪ್ತಿ ಮಾಡಲಾಯಿತು.

ಇದನ್ನೂ ಓದಿ : ನಿರ್ಗಮನದ ವೇಳೆ ಬಿಎಸ್​ವೈ ಭರ್ಜರಿ ಗಿಫ್ಟ್​: ರಾಜ್ಯ ಸರ್ಕಾರಿ ನೌಕರರ ಡಿಎ ಹೆಚ್ಚಳ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.