ETV Bharat / state

ಧಾರವಾಡದ ಕೊರೊನಾ ಸೋಂಕಿತರ ಟ್ರಾವೆಲ್​ ಹಿಸ್ಟರಿ ಪ್ರಕಟಿಸಿದ ಜಿಲ್ಲಾಡಳಿತ - ಕೊರೋನಾ ಸೋಂಕಿತರ ಪ್ರಯಾಣದ ಮಾಹಿತಿ

ಅಹಮದಾಬಾದ್​​ನಿಂದ ಜಿಲ್ಲೆಗೆ ಆಗಮಿಸಿದ್ದ 9 ಜನರಿಗೆ ಕೊರೊನಾ ದೃಢಪಟ್ಟಿರುವ ಹಿನ್ನೆಲೆ ಅವರ ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಸಾರ್ವಜನಿಕರ ಗಮನಕ್ಕೆ ಪ್ರಕಟಿಸಿದೆ. ಈ ಹಿನ್ನೆಲೆ ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಿದ್ದರೆ ತಕ್ಷಣ ಪರೀಕ್ಷೆಗೊಳಪಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Dharwad District administration published Travel History of Corona Infecters
ಧಾರವಾಡದ ಕೊರೊನಾ ಸೋಂಕಿತರ ಟ್ರಾವೆಲ್​ ಹಿಸ್ಟರಿ ಪ್ರಕಟಿಸಿದ ಜಿಲ್ಲಾಡಳಿತ
author img

By

Published : May 13, 2020, 6:08 PM IST

ಧಾರವಾಡ: ಗುಜರಾತಿನ ಅಹಮದಾಬಾದಿನಿಂದ ನಿನ್ನೆ ಜಿಲ್ಲೆಗೆ ಆಗಮಿಸಿದವರಿಗೆ ಕೊರೊನಾ ದೃಢಪಟ್ಟಿರುವ 9 ಜನರ ಕುರಿತು ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿ ದೀಪಾ ಚೋಳನ್ ಸಾರ್ವಜನಿಕ ಪ್ರಕಟಣೆಯಲ್ಲಿ ಸೋಂಕಿತ ರೋಗಿ ಸಂಖ್ಯೆ ಹಾಗೂ ಅವರ ಟ್ರಾವೆಲ್ ಹಿಸ್ಟರಿ ಕುರಿತು ಮಾಹಿತಿ ನೀಡಿದ್ದಾರೆ.

ರೋಗಿ ಸಂಖ್ಯೆ- 879 ಪಿ-880, ಪಿ-881, ಪಿ-882 ಪಿ-883 , ಪಿ-884, ಪಿ-885 ಪಿ-886, ಪಿ-887 ರವರು ಕೊರೊನಾ ಸೋಂಕಿತರಾಗಿದ್ದು, ಹುಬ್ಬಳ್ಳಿ ನಗರದ 6 ಜನ ಕುಂದಗೋಳದ ಇಬ್ಬರು, ಕಲಘಟಗಿಯ ಒಬ್ಬರು ಸೇರಿ ಧಾರವಾಡ ಜಿಲ್ಲೆಯ ಒಟ್ಟು 9 ಜನ ಹಾಗೂ ಗದಗ ಜಿಲ್ಲೆಯ ನರಗುಂದ ತಾಲೂಕಿನ ಇಬ್ಬರು ಸೇರಿಕೊಂಡು ಅಹಮದಾಬಾದಿನಿಂದ ಆಗಮಿಸಿದ್ದಾರೆ.

Dharwad District administration published Travel History of Corona Infecters
ಧಾರವಾಡದ ಕೊರೊನಾ ಸೋಂಕಿತರ ಟ್ರಾವೆಲ್​ ಹಿಸ್ಟರಿ ಪ್ರಕಟಿಸಿದ ಜಿಲ್ಲಾಡಳಿತ

ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯವರು ವ್ಯವಸ್ಥೆ ಮಾಡಿದ ವಾಹನ ಸಂಖ್ಯೆ ಜಿಜೆ-01-ಬಿಯು 9986 ವಾಹನದ ಮುಖಾಂತರ ಹೊರಟು ಮುಂಬೈ ಮೂಲಕ ಮೇ.5 ರಂದು ಸಂಜೆ 7 ಗಂಟೆಗೆ ನಿಪ್ಪಾಣಿಯನ್ನು ತಲುಪಿದ್ದಾರೆ.

ಕರ್ನಾಟಕ ರಾಜ್ಯವನ್ನು ಪ್ರವೇಶ ಮಾಡಲು ಕರ್ನಾಟಕ ಸರ್ಕಾರದಿಂದ ಅನುಮತಿ ಸಿಗುವವರೆಗೂ 3 ದಿನಗಳ ಕಾಲ ಚೆಕ್​​ಪೋಸ್ಟ್​ನಲ್ಲಿ ವಾಸ್ತವ್ಯ ಮಾಡಿದ್ದಾರೆ. ನಂತರ ಮೇ.8 ರಂದು ಸಂಜೆ 5 ಗಂಟೆಗೆ ಸ್ಥಳೀಯರು ವ್ಯವಸ್ಥೆ ಮಾಡಿದ ವಾಹನ ಸಂಖ್ಯೆ ಕೆಎ-09-ಸಿ-2579 ಟಾಟಾ 407 ಮ್ಯಾಕ್ಸಿ ಕ್ಯಾಬ್ ವಾಹನದ ಮುಖಾಂತರ ನಿಪ್ಪಾಣಿಯಿಂದ ಧಾರವಾಡ ಕೃಷಿ ವಿ.ವಿ.ಆವರಣಕ್ಕೆ ರಾತ್ರಿ 8:30 ಗಂಟೆಗೆ ತಲುಪಿರುತ್ತಾರೆ.

ಅದೇ ದಿವಸ ಅವರನ್ನು ಕ್ವಾರಂಟೈನ್ ಮಾಡಿ, ಗಂಟಲು ದ್ರವ ಪರೀಕ್ಷೆ ಗೊಳಪಡಿಸಲಾಗಿತ್ತು. ಮೇ.12 ರಂದು 9 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವ ಕಾರಣ ಈ ಎಲ್ಲಾ ಜನರನ್ನು ಹುಬ್ಬಳ್ಳಿಯ ಕಿಮ್ಸ್ ಕೋವಿಡ್ ಹಾಸ್ಪಿಟಲ್‌ಗೆ ಸ್ಥಳಾಂತರಿಸಲಾಗಿದೆ.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಈ ವ್ಯಕ್ತಿಗಳನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದ್ದು, ಕಾರಣ ಆ ಎಲ್ಲ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077 ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.