ಧಾರವಾಡ: ಲಾಕ್ಡೌನ್ ಜಾರಿಯಿಂದಾಗಿ ದೂರದ ರಾಜಸ್ಥಾನದಲ್ಲಿದ್ದ ತಮ್ಮ ಪಾಲಕರನ್ನು ಸೇರಲಾಗದೆ ಆತಂಕಕ್ಕೀಡಾಗಿದ್ದ 10 ವರ್ಷದ ರೋಮುಕುಮಾರಿ ಹಾಗೂ 8 ವರ್ಷದ ಪೋಸುಕುಮಾರಿ ಎಂಬ ಇಬ್ಬರು ಬಾಲಕಿಯರು ಶುಕ್ರವಾರ ರಾತ್ರಿ ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೆಮಂಡ್ವಾರ ಗ್ರಾಮದಲ್ಲಿರುವ ತಮ್ಮ ಹೆತ್ತ ತಂದೆ-ತಾಯಿಯ ಮಡಿಲು ಸೇರಿದ್ದಾರೆ.
ಇನ್ನು ಮಕ್ಕಳು ತಲುಪಿರುವ ಕುರಿತು ರಾಜಸ್ಥಾನದ ಸಿರೋಹಿ ಜಿಲ್ಲಾಧಿಕಾರಿ ಭಗವತಿ ಪ್ರಸಾದ್, ಧಾರವಾಡ ಜಿಲ್ಲಾಧಿಕಾರಿಗಳಿಗೆ ಪತ್ರ ಸಹ ಬರೆದಿದ್ದಾರೆ.