ಧಾರವಾಡ: ಜಿಲ್ಲೆಯಲ್ಲಿ ಈಗಗಾಗಲೇ 144 ಸೆಕ್ಷನ್ ಜಾರಿಯಾಗಿದ್ದರೂ ಕೆಲ ಅಂಗಡಿಗಳು ತೆರೆದು ವ್ಯಾಪಾರ ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಖುದ್ದು ಜಿಲ್ಲಾಧಿಕಾರಿ ದೀಪಾ ಚೋಳನ್ ಫೀಲ್ಡಿಗಿಳಿದಿದ್ದು, ಮಾರ್ಕೆಟ್ ಬಂದ್ ಮಾಡುವ ಕಾರ್ಯಾಚರಣೆ ನಡೆಸಿದ್ದಾರೆ.
ಬೆಳಗ್ಗೆಯಿಂದಲೇ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನ ಸೇರಿದ್ದರು. ಈ ಹಿನ್ನೆಲೆ ಕಂದಾಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರೂ ಸಹ ಕ್ಯಾರೆ ಎನ್ನದ ವ್ಯಾಪಾರಿಗಳು ತಮ್ಮ ಕಾರ್ಯ ಮುಂದುವರೆಸಿದ್ದರು. ಹೀಗಾಗಿ ಸಂಜೆ ಹೊತ್ತಿಗೆ ಖುದ್ದು ಡಿಸಿ ದೀಪಾ ಚೋಳನ್ ಫೀಲ್ಡ್ಗಿಳಿದಿದ್ದರು. ಪೊಲೀಸರೊಂದಿಗೆ ತೆರಳಿ ಮಾರ್ಕೆಟ್ ಬಂದ್ ಮಾಡಿಸಿದರು.
ಈಗಾಗಲೇ 144 ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೊರಗೆ ತಿರುಗಾಡಬಾರದು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಯಾವುದೇ ವ್ಯಾಪಾರ ವಹಿವಾಟುಗಳನ್ನು ನಡೆಸಬಾರದು ಎಂದು ಎಚ್ಚರಿಕೆ ನೀಡಿದ್ದರು.