ಹುಬ್ಬಳ್ಳಿ(ಧಾರವಾಡ): ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡೋದೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಬಹುತೇಕ ಸೊಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆಯಾಗುತ್ತಿಲ್ಲ. ಜೊತೆಗೆ ಅವರಿಗೆ ಯಾರಿಂದ ಹೇಗೆ ಸೋಂಕು ತಗುಲಿದೆ ಎಂಬ ಮಾಹಿತಿಗಳು ಲಭಿಸುತ್ತಿಲ್ಲ.
ಜಿಲ್ಲೆಯಲ್ಲಿ ನಿನ್ನೆ ಪತ್ತೆಯಾಗಿದ್ದ 26 ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಬಹುತೇಕ ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆಯಾಗಿಲ್ಲ. ಅದಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕವನ್ನು ದುಪ್ಪಟ್ಟಾಗಿಸಿದೆ.
DWD 219 - ಪಿ- 10359 (12 ವರ್ಷ, ಬಾಲಕ ) ಹುಬ್ಬಳ್ಳಿ ಶಿರಡಿನಗರ ಸಾಯಿಬಾಬಾ ದೇವಾಲಯ ಹತ್ತಿರದ ನಿವಾಸಿ.
DWD - 220 ಪಿ- 10360 ( 24 ವರ್ಷ ,ಪುರುಷ ) ಮೌಲಾಲಿ ಬ್ಲಾಕ್, ಮಂಟೂರ ರಸ್ತೆ ನಿವಾಸಿ.
DWD 221 ಪಿ-10361 ( 31 ವರ್ಷ,ಪುರುಷ ) ಹುಬ್ಬಳ್ಳಿ ಇಟಗಿ ಮಾರುತಿ ಗಲ್ಲಿ ನಿವಾಸಿ.
DWD 222 ಪಿ -10362 ( 4 ವರ್ಷ,ಬಾಲಕಿ ) ಹುಬ್ಬಳ್ಳಿ ಗಂಗಾಧರ ನಗರ, ಉಂಡಿ ಪ್ಲಾಟ್ ,ದೊಡ್ಡಮನಿ ಕಾಲೋನಿ ನಿವಾಸಿ.
DWD 223 ಪಿ -10363 ( 40 ವರ್ಷ,ಪುರುಷ ) ಹುಬ್ಬಳ್ಳಿ ಎಸ್ .ಎಂ.ಕೃಷ್ಣ ನಗರ ನಿವಾಸಿ.
DWD 224 ಪಿ -10364( 18 ವರ್ಷ,ಮಹಿಳೆ ) ಹುಬ್ಬಳ್ಳಿ ಕೇಶ್ವಾಪುರ ಉದಯನಗರ ನಿವಾಸಿ,
DWD 225 ಪಿ -10365 ( 02 ವರ್ಷ,ಬಾಲಕ )ಹಳೆ ಹುಬ್ಬಳ್ಳಿ ಲತ್ತಿಪೇಟ ನಿವಾಸಿ.
DWD 226 ಪಿ -10366 ( 24 ವರ್ಷ,ಪುರುಷ ) ಧಾರವಾಡ ಗೌಳಿಗಲ್ಲಿ ನಿವಾಸಿ.
DWD 227 ಪಿ -10367 ( 23 ವರ್ಷ,ಮಹಿಳೆ) ಹುಬ್ಬಳ್ಳಿ ಮಂಟೂರು ರಸ್ತೆ ನಿವಾಸಿ.
DWD 228 ಪಿ -10368 ( 23 ವರ್ಷ,ಪುರುಷ ) ಹುಬ್ಬಳ್ಳಿ ಗಾರ್ಡನ್ ಪೇಟ, ಎಂ.ವಿ.ಗಲ್ಲಿ ನಿವಾಸಿ.
DWD 229 ಪಿ -10369 ( 09 ವರ್ಷ, ಬಾಲಕ) ನೂಲ್ವಿ ಗ್ರಾಮದ ಹುಡೇದ ಓಣಿ ನಿವಾಸಿ.
DWD 231 ಪಿ -10371 ( 38 ವರ್ಷ,ಪುರುಷ ) ಹುಬ್ಬಳ್ಳಿ ಗೋಕುಲ ರಸ್ತೆಯ ಸನ್ಮಾರ್ಗ ನಗರ ನಿವಾಸಿ.
DWD 232 ಪಿ -10372 ( 40 ವರ್ಷ ಪುರುಷ ) ಧಾರವಾಡ ನುಗ್ಗಿಕೇರಿ ನಿವಾಸಿ.
DWD 233 ಪಿ -10373 ( 38 ವರ್ಷ,ಪುರುಷ) ಧಾರವಾಡ ಮಹಾಂತ ನಗರ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ಐಎಲ್ಐ) ದಿಂದ ಬಳಲುತ್ತಿದ್ದರು
DWD 235 ಪಿ -10375 ( 83 ವರ್ಷ,ಪುರುಷ ) ಮೊರಬ ಗ್ರಾಮದ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ( SARI) ಬಳಲುತ್ತಿದ್ದರು.
DWD 237 ಪಿ -10377 ( 35 ವರ್ಷ,ಮಹಿಳೆ ) ನೂಲ್ವಿ ಗ್ರಾಮದವರು.
DWD 239 ಪಿ -10379 ( 10 ವರ್ಷ,ಬಾಲಕಿ ) ನವಲಗುಂದ ತಾಲೂಕು ಗುಡಿಸಾಗರ ಗ್ರಾಮದವರು. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.
DWD 240 ಪಿ -10380 ( 52 ವರ್ಷ,ಮಹಿಳೆ ) ಹುಬ್ಬಳ್ಳಿ ಮಿಲ್ಲತ್ ನಗರ ನಿವಾಸಿ.
DWD 241 ಪಿ -10381 ( 50 ವರ್ಷ,ಮಹಿಳೆ ) ಹಳೆ ಹುಬ್ಬಳ್ಳಿ ದೋಭಿ ಘಾಟ್ ನಿವಾಸಿ .
DWD 242 ಪಿ -10382 ( 48 ವರ್ಷ,ಮಹಿಳೆ ) ಹುಬ್ಬಳ್ಳಿ ಅರಿಹಂತ ನಗರ,ಪೆಸಿಫಿಕ್ ಮ್ಯಾನ್ಷನ್ ನಿವಾಸಿ
DWD 244 -ಪಿ -10384 ( 53 ವರ್ಷ,ಮಹಿಳೆ )ಹಳೆ ಹುಬ್ಬಳ್ಳಿ ಸದಾಶಿವ ಕಾಲನಿ ಮೂರನೇ ಕ್ರಾಸ್ ನಿವಾಸಿ.
ಈ ಮೇಲ್ಕಂಡವರ ಸಂಪರ್ಕ ಪತ್ತೆಯಾಗಿಲ್ಲ. ಸೋಂಕಿತರಿಗೆ ಸೋಂಕು ಹೇಗೆ, ಯಾರಿಂದ ತಗುಲಿದೆ ಎನ್ನುವುದು ಕೂಡ ತಿಳಿಯದೇ ಆತಂಕಕ್ಕೀಡು ಮಾಡಿದೆ.