ಧಾರವಾಡ: ನಗರದ ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ದುರಂತದಲ್ಲಿ ಹಾನಿಗೊಳಗಾದ ಅಂಗಡಿ ಮಾಲೀಕರಿಗೆ ಸರ್ಕಾರ ಇನ್ನು ಪರಿಹಾರ ನೀಡಿಲ್ಲ ಎಂದು ಅಂಗಡಿ ಮಾಲೀಕರು ಆರೋಪಿಸಿದ್ದಾರೆ.
ಮಾ. 19 ರಂದು ಇಲ್ಲಿನ ಕುಮಾರೇಶ್ವೇರ ನಗರದಲ್ಲಿ ಬೃಹತ್ ಕಟ್ಟಡ ಕುಸಿದು ರಾಜ್ಯದ್ಯಂತ ಸುದ್ದಿಯಾಗಿತ್ತು. ಈ ಕಟ್ಟಡದಲ್ಲಿ ಸಿಲುಕಿ 19 ಜನರು ಅಸುನೀಗಿದರು. ಆದರೆ ಅಗ್ನಿಶಾಮಕ ದಳ, ರಾಜ್ಯ ವಿಪತ್ತು ದಳ ಹಾಗೂ ರಾಷ್ಟ್ರೀಯ ವಿಪತ್ತು ದಳದ ಸಿಬ್ಬಂದಿ ಸೇರಿದಂತೆ ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿ ಕಟ್ಟಡದಲ್ಲಿ ಸಿಲುಕಿರೊ 57 ಜನರನ್ನು ರಕ್ಷಣೆ ಮಾಡಿದ್ದರು.
ಈ ಕಟ್ಟಡ ದುರಂದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಸರ್ಕಾರ 7 ಲಕ್ಷ ರೂ ಪರಿಹಾರ ಪರಿಹಾರ ಹಣ ನೀಡಿದೆ. ಆದರೆ ಕಟ್ಟಡದಲ್ಲಿ ಬಾಡಿಗೆ ಅಂಗಡಿಗಳನ್ನು ಪಡೆದುಕೊಂಡು ವ್ಯಾಪಾರ ಮಾಡುತ್ತಿದ್ದ ಮಾಲೀಕರಿಗೆ ಪರಿಹಾರ ನೀಡಿಲ್ಲ. ಕಟ್ಟಡದಲ್ಲಿರುವ ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ವಸ್ತುಗಳು ಹಾನಿಯಾಗಿದ್ದವು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಕಟ್ಟಡ ಮಾಲೀಕರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.
ಕಟ್ಟಡ ದುರಂತ ಹಿನ್ನೆಲೆ ಕಟ್ಟಡ 5 ಜನ ಮಾಲೀಕರು ಹಾಗೂ ಪಾಲಿಕೆ ಮೂರು ಜನ ಅಧಿಕಾರಿಗಳ ಮೇಲೆ ಕೇಸ್ ದಾಖಲಾಗಿತ್ತು. ಆದ್ರೆ ವರ್ಷ ಕಳೆಯುತ್ತ ಬಂದ್ರು ಕಟ್ಟಡದಲ್ಲಿ ಅಂಗಡಿ ಖರೀದಿಸಿದ ಮಾಲೀಕರಿಗೆ ಪರಿಹಾರ ನೀಡದಿರುವುದು ವಿಪರ್ಯಾಸವಾಗಿದೆ.