ETV Bharat / state

ಬ್ರಿಟನ್​​ನಿಂದ ಆಗಮಿಸಿರುವ ಎಲ್ಲರ ವರದಿ ನೆಗೆಟಿವ್: ನಿಟ್ಟುಸಿರು ಬಿಟ್ಟ ಧಾರವಾಡದ ಜನತೆ

ಬ್ರಿಟನ್​ನಿಂದ ಧಾರವಾಡ ಜಿಲ್ಲೆಗೆ ಆಗಮಿಸಿರುವ ಐದು ಜನರ ಕೋವಿಡ್ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ್ ತಿಳಿಸಿದ್ದಾರೆ.

Nitesh K Patil
ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ್
author img

By

Published : Dec 23, 2020, 3:55 PM IST

ಧಾರವಾಡ: ಬ್ರಿಟನ್​ನಿಂದ ಬಂದವರಿಂದ ಕೊರೊನಾ ಭೀತಿ ಎದುರಿಸುತ್ತಿದ್ದ ಧಾರವಾಡ ಜಿಲ್ಲೆ ನಿಟ್ಟುಸಿರು ಬಿಡುವಂತಾಗಿದೆ. ಎಲ್ಲರ ಕೊರೊನಾ ವರದಿ ನೆಗೆಟಿವ್ ಬಂದಿದೆ.

ಧಾರವಾಡ ಜಿಲ್ಲೆಗೆ ಆಗಮಿಸಿರುವ ಎಲ್ಲಾ ಐದು ಜನರ ಕೋವಿಡ್ ವರದಿ ನೆಗೆಟಿವ್ ಬಂದಿದೆ ಎಂದು ಖುದ್ದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ್​ ತಿಳಿಸಿದ್ದಾರೆ. ‌

ನಿನ್ನೆ ರಾತ್ರಿ ಐವರ ಪೈಕಿ ಒಂದು ವರದಿ ನೆಗೆಟಿವ್ ಬಂದಿತ್ತು. ಇಂದು ನಾಲ್ಕು ವರದಿಗಳು ‌ನೆಗೆಟಿವ್ ಬಂದಿರುವುದರಿಂದ ಜಿಲ್ಲೆಯ ‌ಜನರು ಆತಂಕದಿಂದ ದೂರವಾಗಿದ್ದಾರೆ.

ಬ್ರಿಟನ್​ನಿಂದ ಜಿಲ್ಲೆಗೆ ಆಗಮಿಸಿದವರನ್ನು ಜಿಲ್ಲಾಡಳಿತ ಗುರುತಿಸಿ ಹೋಂ ಕ್ವಾರಂಟೈನ್ ವಿಧಿಸಿ, ಅವರ ಗಂಟಲು ಹಾಗೂ ಮೂಗಿನ ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಅವರೆಲ್ಲರ ವರದಿ ಇದೀಗ ನೆಗೆಟಿವ್ ಬಂದಿವೆ.

ಓದಿ...ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ರಾತ್ರಿ 10 ಗಂಟೆಯ ಬಳಿಕ ಬಸ್​ ಬಂದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.