ETV Bharat / state

ಹುಬ್ಬಳ್ಳಿ ಜಲಮಂಡಳಿಯಿಂದ ಬಾಕಿ ವೇತನ ಹಾಗೂ ಮರು ನೇಮಕಾತಿಗೆ ನೌಕರರ ಆಗ್ರಹ...

ಹುಬ್ಬಳ್ಳಿ ಧಾರವಾಡ ನೀರು ಸರಬರಾಜು ವಿಭಾಗದ ನೌಕರರ ಮರು ನೇಮಕ ಮಾಡಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹಂಗಾಮಿ ನೌಕರರ ಸಂಘ ಒತ್ತಾಯಿಸಿದೆ‌.

author img

By

Published : May 25, 2023, 9:45 PM IST

ಹುಬ್ಬಳ್ಳಿ
ಹುಬ್ಬಳ್ಳಿ

ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ನೀರು ಸರಬರಾಜು ವಿಭಾಗದ ನೌಕರರನ್ನು ಮರು ನೇಮಕ ಮಾಡಿಕೊಳ್ಳುವುದು ಹಾಗೂ 4 ತಿಂಗಳ ವೇತನವನ್ನು ಪಾವತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹು-ಧಾ ಮಹಾನಗರ ಸಭೆಯ ನೀರು ಸರಬರಾಜು ವಿಭಾಗದ ದಿನಗೂಲಿ ಗುತ್ತಿಗೆ ಹಾಗೂ ಹಂಗಾಮಿ ನೌಕರರ ಸಂಘ ಒತ್ತಾಯಿಸಿದೆ‌.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮುಕ್ಕಲ್, ಕಳೆದ 15-20 ವರ್ಷಗಳಿಂದ ನಾವು ಅವಳಿ ನಗರಕ್ಕೆ ಯಾವುದೇ ತೊಂದರೆಯಾಗದಂತೆ ಸಮರ್ಪಕವಾಗಿ ನೀರು ಸರಬರಾಜು ಮಾಡುತ್ತಾ ಬಂದಿದ್ದು, ಹು-ಧಾ ನೀರು ಸರಬರಾಜು ವ್ಯವಸ್ಥೆಯನ್ನು ಜಲಮಂಡಳಿಯಿಂದ ಮಹಾನಗರ ಪಾಲಿಕೆ ಮುಖಾಂತರ ಎಲ್ & ಟಿ ಅವರಿಗೆ ಹಸ್ತಾಂತರಿಸಲಾಗಿದೆ.

ಆದರೇ 2022 ಡಿಸೆಂಬರ್ 2 ರಂದು ಹುಧಾ ಆಯುಕ್ತರು ಮೌಖಿಕ ಆದೇಶ ಹೊರಡಿಸಿ ಸೇವಾ ನಿರತ ನೌಕರರನ್ನು ವಜಾಗೊಳಿಸಿದ್ದಾರೆ. ಇದನ್ನು ಖಂಡಿಸಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು 30 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ ಪ್ರತಿಫಲವಾಗಿ 7 ತಿಂಗಳ ವೇತನದಲ್ಲಿ ಕೇವಲ 3 ತಿಂಗಳು ವೇತನ ನೀಡಲಾಗಿದೆ. ಇನ್ನುಳಿದ 4 ತಿಂಗಳ ವೇತನವನ್ನು ನೀಡದೆ ಹಾಗೂ ಮರುನೇಮಕಾತಿ ಮಾಡದೇ ಇರುವುದು ನಮಗೆ ಅಸಮಾಧಾನ ತಂದಿದೆ.

ಇನ್ನೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸಭೆ ಮಾಡಿ ಹು-ಧಾ ನಗರಕ್ಕೆ ಸಮರ್ಪಕವಾಗಿ ನೀರು ಸರಬರಾಜು ಮಾಡುವುದು ಹಾಗೂ ಮೂರು ದಿನಗಳಲ್ಲಿ ಹಳೆಯ‌ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರೂ ಸಹಿತ ಇದುವರೆಗೂ ಮರು ನೇಮಕ ಮಾಡಿಕೊಂಡಿಲ್ಲ. ಈ ನಿಟ್ಟಿನಲ್ಲಿ ಎಲ್ & ಟಿಯವರು ಹಳೆಯ ನೌಕರರನ್ನು ಮರುನೇಮಕಾತಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಮೇಶ ಲಮಾಣಿ, ಮಹಾಂತೇಶ ಗೌಡರ, ಆನಂದ ಕಾಳಮ್ಮವರ, ಕೋದಂಡರಾಮ ಅನಂತಪುರ ಉಪಸ್ಥಿತರಿದ್ದರು.

ಕೆರೆಯಲ್ಲಿ ಮೀನುಗಳ ಸಾವು: ಚರಂಡಿ ನೀರು ನೇರವಾಗಿ ಕೆರೆಗೆ ಸೇರುತ್ತಿರುವುದರಿಂದ ಧಾರವಾಡದ ಐತಿಹಾಸಿಕ ಕೆಲಗೇರಿ ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದೆ. ವಿಶ್ವೇಶ್ವರಯ್ಯನವರ ವಿನ್ಯಾಸದಲ್ಲಿ ನಿರ್ಮಾಣವಾಗಿರುವ ನೂರು ಎಕರೆ ವಿಸ್ತಾರದ ಐತಿಹಾಸಿಕ ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿವೆ. ಚರಂಡಿ ನೀರು ನೇರವಾಗಿ ಕೆರೆಗೆ ಸೇರುತ್ತಿರುವುದು ಮೀನುಗಳ‌ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದಾಗಿ ಸತ್ತ ಮೀನುಗಳು ದಡದಲ್ಲಿ ತೇಲಾಡುತ್ತಿವೆ.

ಇಲ್ಲಿ ನಿತ್ಯ ನೂರಾರು ಜನರು ವಾಯುವಿಹಾರಕ್ಕೆ ಬರುತ್ತಾರೆ. ಕೆರೆಗೆ ಚರಂಡಿ ನೀರು ಸೇರುತ್ತಿರುವುದರಿಂದ ಗಬ್ಬು ವಾಸನೆ ಬರುತ್ತಿದ್ದು, ಜನರಿಗೆ ತೊಂದರೆಯಾಗುತ್ತಿದೆ. ಕೃಷಿ ವಿಶ್ವವಿದ್ಯಾಲಯ ಮತ್ತು ಮಹಾನಗರ ಪಾಲಿಕೆ ನಿರ್ಲಕ್ಷ್ಯದ ಮಧ್ಯೆ ಮೀನುಗಳ ಮಾರಣಹೋಮ ನಡೆದಿದೆ. ಕೆರೆ ಪಾಲಿಕೆ ವ್ಯಾಪ್ತಿಗೆ ಬರುತ್ತದೆ. ಆದರೆ, ಕೃಷಿ ವಿಶ್ವವಿದ್ಯಾಲಯ ಕೆರೆಯ ನೀರು ಬಳಸುತ್ತಿದೆ. ಈ ಹಿನ್ನೆಲೆ ಇಬ್ಬರಿಂದಲೂ ಸರಿಯಾದ ನಿರ್ವಹಣೆ ಆಗುತ್ತಿಲ್ಲ. ಇದರಿಂದ ಕೆರೆಯ ವಾತಾವರಣ ಹದಗೆಟ್ಟು ಹೋಗಿದೆ ಎಂದು ಜನರ ಆರೋಪಿಸಿದ್ದಾರೆ.

ಇದನ್ನೂ ಓದಿ: ಐತಿಹಾಸಿಕೆ ಕೆರೆಗೆ ಚರಂಡಿ ನೀರು ಸೇರ್ಪಡೆ: ಮೀನುಗಳ ಮಾರಣಹೋಮ‘

ETV Bharat Logo

Copyright © 2024 Ushodaya Enterprises Pvt. Ltd., All Rights Reserved.