ಹುಬ್ಬಳ್ಳಿ: ಸಾವಿಧಾನಿಕ ಹುದ್ದೆ ಜಾತಿ ಆಧಾರದ ಮೇಲೆ ಕೊಡಬೇಕು ಎಂಬುದು ಸಂವಿಧಾನಕ್ಕೆ ಮಾಡುವ ದೊಡ್ಡ ಅಪಚಾರ ಎಂದು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಪ್ರತಿಪಾದಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಎದುರು ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಸಿಎಂಗಿಂತ ದೊಡ್ಡ ಸ್ಥಾನಕ್ಕೆ ಅರ್ಹರು ಎಂದರು. ಹೆಚ್ ಡಿ ರೇವಣ್ಣ ಕೂಡ ಸಿಎಂ ಆಗಲು ಅರ್ಹರು ಎಂಬ ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ಈ ವೇಳೆ ಮಹದೇವಪ್ಪ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ದೊಡ್ಡವರು. ಆದ್ರೆ ಸಾಂವಿಧಾನಿಕ ಹುದ್ದೆ ವಿಚಾರದಲ್ಲಿ ಜಾತಿ ಬಗ್ಗೆ ಮಾತಾಡೋದು ತಪ್ಪು ಎಂದರು.
ಸಿಎಂ ಸ್ಥಾನ ನಂಬರ್ ಗೇಮ್ ಇದ್ದಂತೆ. ಹೆಚ್ ಡಿ ರೇವಣ್ಣ ಸಹ ಸಿಎಂ ಸ್ಥಾನಕ್ಕೆ ಅರ್ಹರು ಎಂದು ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಮಹದೇವಪ್ಪ ತಿಳಿಸಿದರು.