ETV Bharat / state

ಹುಬ್ಬಳ್ಳಿಯಲ್ಲಿ ಮುಂದುವರೆದ ಮರಣ ಮೃದಂಗ: 72 ದಿನಗಳಲ್ಲಿ 417 ಮಂದಿ ಬಲಿ! - ಹುಬ್ಬಳ್ಳಿ ಕೋವಿಡ್​ ನ್ಯೂಸ್

ಲಾಕ್​ಡೌನ್ ಬಳಿಕ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದರೂ ಮೃತರ ಸಂಖ್ಯೆ ಕಡಿಮೆಯಾಗಿಲ್ಲ. ಕಳೆದ 72 ದಿನಗಳಲ್ಲಿ 417 ಜನರು ಕೊರೊನಾದಿಂದ ಮೃತಪಟ್ಟಿದ್ದು, ಜಿಲ್ಲೆಯ ಜನರು ಆತಂಕ್ಕೀಡಾಗಿದ್ದಾರೆ.

hubballi covid death rate
ಹುಬ್ಬಳ್ಳಿ ಕೋವಿಡ್​ ಡೆತ್​ ರೇಟ್​
author img

By

Published : Jun 11, 2021, 3:32 PM IST

ಹುಬ್ಬಳ್ಳಿ: ಮಹಾಮಾರಿ ಕೋವಿಡ್​ಗೆ ಕಡಿವಾಣ ಹಾಕಲು ರಾಜ್ಯಾದ್ಯಂತ ಹಾಕಲಾಗಿದ್ದ ಲಾಕ್​ಡೌನ್​ನಿಂದ ಸೋಂಕಿತರ ಪ್ರಮಾಣ ಕೊಂಚ ಹತೋಟಿಗೆ ಬಂದಿದೆ. ಆದ್ರೆ ಮೃತರ ಪ್ರಮಾಣ ನಿರೀಕ್ಷೆಯಷ್ಟು ನಿಯಂತ್ರಣಗೊಂಡಿಲ್ಲ.

ಧಾರವಾಡ ಜಿಲ್ಲೆಯಲ್ಲಿಯೂ ಸೋಂಕಿತರ ಪ್ರಮಾಣ ದಿನೇ ದಿನೆ ಇಳಿಮುಖವಾಗುತ್ತಿದ್ದರೂ ಕೂಡ ಡೆತ್​ ರೇಟ್​ ಮಾತ್ರ ಕಡಿಮೆ ಆಗುತ್ತಿಲ್ಲ. ಇದ್ರಿಂದ ಜಿಲ್ಲೆಯ ಜನರು ಆತಂಕ್ಕೀಡಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯ ಮರಣ ಮೃದಂಗ ಸದ್ದು ಹೆಚ್ಚುತ್ತಲೇ ಇದೆ. ಏಪ್ರಿಲ್​ನಿಂದ ಈವರೆಗಿನ ಸಾವಿನ ಸಂಖ್ಯೆ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. 72 ದಿನಗಳಲ್ಲಿ 417 ಜನರು ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ.

ಮೇ ತಿಂಗಳಲ್ಲಿ 267 ಜನರನ್ನು ಕೋವಿಡ್​​ ಬಲಿ ಪಡೆದಿದೆ. ಜೂನ್ ತಿಂಗಳ 10 ದಿನಗಳ ಡೆತ್ ರೇಟ್ ಸಹ ದುಪ್ಪಟ್ಟು ಆಗಿದೆ. ಕೊರೊನಾ‌ ಕೇಸ್​ಗಳು ಕಡಿಮೆ ಆದರೂ ಕೂಡ ನಿತ್ಯ 10ಕ್ಕೂ ಹೆಚ್ಚು ಸಾವು ಸಂಭವಿಸುತ್ತಿವೆ. ಡೆತ್ ರೇಟಿಂಗ್ ಹೆಚ್ಚುತ್ತಿರೋದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಬೆಡ್, ವೆಂಟಿಲೇಟರ್ ಬೆಡ್​​, ಐಸಿಯು ಖಾಲಿಯಾಗುತ್ತಿದ್ದರೂ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ.

ಇದನ್ನೂ ಓದಿ: ಆರಾಮಿದ್ದೀವಿ, ನಾವ್ಯಾಕ್ ಲಸಿಕೆ ಹಾಕ್ಕೋಬೇಕು?: ಜನರ ಪ್ರಶ್ನೆಗೆ ಅಧಿಕಾರಿಗಳು ಹೈರಾಣು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.