ETV Bharat / state

ಬಸ್ ಹರಿದು ಮೃತಪಟ್ಟ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕೆಪಿಸಿಸಿಯಿಂದ ಪರಿಹಾರ - ಕಾಂಗ್ರೆಸ್​ ಪಕ್ಷದ ಮಹದಾಯಿ ಜಲ ಜನ ಆಂದೋಲನ

ಮಹದಾಯಿ ಜಲ ಜನ ಆಂದೋಲನ ಕಾರ್ಯಕ್ರಮಕ್ಕೆ ಬಂದ ಕಾರ್ಯಕರ್ತರ ಮೇಲೆ ಬಸ್​ ಹರಿದು ಇಬ್ಬರು ಸಾವಿಗೀಡಾದ ಘಟನೆ ನಡೆದಿತ್ತು.

Congress leaders visiting Kim's Hospital and inquiring
ಕಿಮ್ಸ್ ಗೆ ಭೇಟಿ ನೀಡಿ ವಿಚಾರಿಸುತ್ತಿರುವ ಕಾಂಗ್ರೆಸ್​ ಮುಖಂಡರು
author img

By

Published : Jan 3, 2023, 9:29 AM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ್ದವರ ಮೇಲೆ ಬಸ್ ಹರಿದು ಇಬ್ಬರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಹೆಚ್.ಕೆ.ಪಾಟೀಲ ನಿನ್ನೆ ರಾತ್ರಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಮೃತರ ಕುಟುಂಬಕ್ಕೆ ಧೈರ್ಯ ತುಂಬಿದರು.

ನಿಂಗಪ್ಪ ಮಣ್ಣಾಪುರ, ನಬೀಸಾಬ್ ನಾಗನೂರು ಮೃತಪಟ್ಟಿದ್ದರು. ಯಲ್ಲಪ್ಪ ಕರಿಗೌಡರ್‌ಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಕುಟುಂಬಸ್ಥರಿಗೆ ಕೆಪಿಸಿಸಿಯಿಂದ ತಲಾ ಐದು ಲಕ್ಷ ರೂಪಾಯಿ ಹಾಗು ಗಾಯಾಳುವಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್‌.ಎಚ್‌. ಕೋನರೆಡ್ಡಿ, ಜಿ.ಎಸ್.ಪಾಟೀಲ್, ಮಹೇಂದ್ರ ಸಿಂಘಿ ಇದ್ದರು.

ಘಟನೆಯ ಹಿನ್ನೆಲೆ: ನಗರದ ನೆಹರೂ ಮೈದಾನದಲ್ಲಿ ನಿನ್ನೆ ಕಾಂಗ್ರೆಸ್​ ಪಕ್ಷದ ಮಹದಾಯಿ ಜಲ ಜನ ಆಂದೋಲನ ಕಾರ್ಯಕ್ರಮವಿತ್ತು. ಇದಕ್ಕೆ ಆಗಮಿಸಿದ ಕಾರ್ಯಕರ್ತರ ಮೇಲೆ ಬಸ್​ ಹರಿದಿತ್ತು. ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಫತ್ರೆಯಲ್ಲಿ ಮತ್ತೋರ್ವ ಅಸುನೀಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.