ETV Bharat / state

1947ರ ರಾಷ್ಟ್ರಧ್ವಜ ಇಂದಿಗೂ ಸುರಕ್ಷಿತ..75 ವರ್ಷಗಳಿಂದ ಇದೇ ತಿರಂಗಾ ಹಾರಿಸುತ್ತಿದೆ ಈ ಕುಟುಂಬ!

ಧಾರವಾಡ ನಗರದ ಕುಟುಂಬವೊಂದು ಕಳೆದ 75 ವರ್ಷಗಳಿಂದ ರಾಷ್ಟ್ರ ಧ್ವಜವನ್ನು ಕಾಪಾಡಿಕೊಂಡು ಬರುವ ಮೂಲಕ ಮಾದರಿಯಾಗಿದೆ.

author img

By

Published : Aug 14, 2021, 12:44 PM IST

Updated : Aug 14, 2021, 8:10 PM IST

Protection of National Flag
ಬ್ಯಾಂಕ್ ಲಾಕರ್​ನಲ್ಲಿಟ್ಟು ರಾಷ್ಟ್ರ ಧ್ವಜದ ರಕ್ಷಣೆ

ಧಾರವಾಡ : ಬ್ರಿಟಿಷರ ಕಪಿಮುಷ್ಠಿಯಿಂದ ದೇಶ ಸ್ವಾತಂತ್ರ್ಯಗೊಂಡು 75 ವರ್ಷ ತುಂಬಿದ ಸಂಭ್ರಮದಲ್ಲಿದೆ. ಈ ವರ್ಷದ ಸ್ವಾತಂತ್ರ್ಯ ದಿನವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಥವಾ ಆಜಾದಿ ಕಾ ಅಮೃತ್​ ಮಹೋತ್ಸವ್​ ಎಂಬ ಹೆಸರಿನಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗ್ತಿದೆ. ಇದಕ್ಕಾಗಿ ದೇಶದ ನಾನಾ ಕಡೆ ಈಗಾಗಲೇ ಸಿದ್ಧತೆಯೂ ನಡೆದಿದೆ.

47 ರ ಧ್ವಜ ಇಂದಿಗೂ ಸುರಕ್ಷಿತ

ಈ ವಿಶೇಷ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆ ಮೇಲೂ ತ್ರಿವರ್ಣ ಧ್ವಜ ಹಾರಾಡಲಿದೆ. ಜೊತೆಗೆ ಧ್ವಜಾರೋಹಣಕ್ಕೆ ತನ್ನದೇ ಆದ ವಿಶೇಷ ಸ್ಥಾನಮಾನವೂ ಇದೆ. ದೇಶದ ಹೆಮ್ಮೆಯ ಪ್ರತೀಕ, ತ್ರಿವರ್ಣ ಧ್ವಜ ದೇಶದ ಗೌರವದ ಸಂಕೇತ. ಅಂತಹ ರಾಷ್ಟ್ರಧ್ವಜವನ್ನು ಧಾರವಾಡದ ಕುಟುಂಬವೊಂದು ಕಳೆದ 75 ವರ್ಷಗಳಿಂದ ಜೋಪಾನ ಮಾಡಿಕೊಂಡು ಬರುತ್ತಿದೆ. 1947 ರಲ್ಲಿ ಆರೋಹಣಗೊಂಡಿದ್ದ ಈ ಧ್ವಜ ಇಂದಿಗೂ ಸುರಕ್ಷಿತವಾಗಿದೆ.

ಮನೆ ಮುಂದೆ ಧ್ವಜಾರೋಹಣ

ನಗರದ ಗಾಂಧಿನಗರದ ನಿವಾಸಿ ನಿವೃತ್ತ ಪಶು ವೈಧ್ಯಾಧಿಕಾರಿ ಗಂಗಾಧರ ಕುಲಕರ್ಣಿ ಅವರ ಕುಟುಂಬ ಕಳೆದ 75 ವರ್ಷಗಳಿಂದ ರಾಷ್ಟ್ರ ಧ್ವಜವನ್ನು ಕಾಪಾಡಿಕೊಂಡು ಬರುತ್ತಿದೆ. ಪ್ರತಿ ವರ್ಷ ಆಗಸ್ಟ್ 15 ರಂದು ಮಾತ್ರ ಈ ಧ್ವಜವನ್ನು ತಂದು ಮನೆಯ ಮುಂದೆ ಆರೋಹಣ ಮಾಡಲಾಗುತ್ತದೆ. ಬಳಿಕ ಎರಡು ದಿನ ಕಳೆದು ಮತ್ತೆ ಲಾಕರ್​ನಲ್ಲಿ ಇಡುತ್ತಾರೆ. ಹೀಗೆ ಪ್ರತಿವರ್ಷ ಸ್ವಾತಂತ್ರ್ಯ ದಿನದಂದು ಈ ಕುಟುಂಬ ಈ ಕಾರ್ಯ ಮಾಡಿಕೊಂಡು ಬರುತ್ತಿದೆ.

ಓದಿ : ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಐಎಲ್​ಎಸ್​​​ ಕಾರ್ಯಾರಂಭ: ಹವಾಮಾನ ವೈಪರೀತ್ಯಕ್ಕೆ ಗುಡ್‌ ಬೈ

ಕೋವಿಡ್​​ ಆತಂಕ.. ವಿಶೇಷ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸದ ಕುಟುಂಬಸ್ಥರು

ಗಂಗಾಧರ ಕುಲಕರ್ಣಿ ಅವರ ಮನೆಯಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿದೇಶದಲ್ಲಿರುವವರು ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಮತ್ತು ಸ್ಥಳೀಯರು ಪಾಲ್ಗೊಳ್ಳುವುದು ವಿಶೇಷ. ಆದರೆ, ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ಈ ವಿಶೇಷ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಭಾಗವಹಿಸಿಲ್ಲ.

75 ವರ್ಷಗಳಿಂದ ಇದೇ ತಿರಂಗಾ ಹಾರಿಸುತ್ತಿದೆ ಈ ಕುಟುಂಬ!

ತಾಯಿಯ ಆಸೆಯಂತೆ ಧ್ವಜಾರೋಹಣ

ಮೂಲತಃ ವಿಜಯಪುರ ಜಿಲ್ಲೆಯ ನಾಲತವಾಡ ಗ್ರಾಮದವರಾದ ಗಂಗಾಧರ ಅವರು, ಸಣ್ಣವರಿದ್ದಾಗ ತಮ್ಮ ಗುರುಗಳಿಂದ ನಾಲ್ಕಾಣೆ ಪಡೆದು ತಾಯಿಗೆ ಕೊಟ್ಟಿದ್ದರು. ಆ ಹಣದಲ್ಲಿ ಅವರ ತಾಯಿ ರಾಷ್ಟ್ರ ಧ್ವಜ ಖರೀದಿಸಿ ಮನೆಯ ಮುಂದೆ ಆರೋಹಣ ಮಾಡಿದ್ದರು. 2010ರವರೆಗೆ ಗಂಗಾಧರ ಅವರ ಅಮ್ಮ ರಾಷ್ಟ್ರ ಧ್ವಜವನ್ನು ಬಹಳ ಜತನದಿಂದ ಕಾಪಾಡಿಕೊಂಡು ಬಂದಿದ್ದರು. ಆದರೆ ಇವರು ವಿಜಯಪುರದಿಂದ ಧಾರವಾಡಕ್ಕೆ ಬಂದ ಮೇಲೆ ತಾಯಿಯ ಆಸೆಯಂತೆ ಗಂಗಾಧರ ಅವರು ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

2011ರಿಂದ ರಾಷ್ಟ್ರಧ್ವಜ ಬ್ಯಾಂಕ್​ ಲಾಕರ್​​ನಲ್ಲಿ ಸುರಕ್ಷಿತ

2010ರವರೆಗೂ ಗಂಗಾಧರ ಅವರ ತಾಯಿ ರಾಷ್ಟ್ರಧ್ವಜವನ್ನು ಕಾಪಾಡಿಕೊಂಡು ಬಂದಿದ್ದರು. ಆದರೆ 2011ರಿಂದ ಗಂಗಾಧರ ಅವರೇ ರಾಷ್ಟ್ರಧ್ವಜದ ಹೊಣೆಯನ್ನು ಹೊತ್ತಿದ್ದಾರೆ. ಕಳೆದ 10 ವರ್ಷಗಳಿಂದ ಅವರು ರಾಷ್ಟ್ರಧ್ವಜವನ್ನು ಬ್ಯಾಂಕ್​ ಲಾಕರ್​​ನಲ್ಲಿ ಇಡುತ್ತಿದ್ದಾರೆ. ಪ್ರತಿ ವರ್ಷ ಸ್ವಾತಂತ್ರ್ಯ ದಿನ ಬಂದಾಗ ಧ್ವಜವನ್ನು ಮನೆಗೆ ತರುತ್ತಾರೆ. ಆಗಸ್ಟ್​ 15ರ ಧ್ವಜಾರೋಹಣ ನೆರವೇರಿಸಿ ನಂತರ ಸಂಜೆ ಅವರೋಹಣ ಕೈಗೊಳ್ಳುತ್ತಾರೆ. ಮರುದಿನ ರಾಷ್ಟ್ರಧ್ವಜವನ್ನು ಮತ್ತೆ ಬ್ಯಾಂಕ್​ ಲಾಕರ್​​ನಲ್ಲಿ ಇಟ್ಟು ಮನೆಗೆ ವಾಪಸ್ಸಾಗುತ್ತಾರೆ.

ದೇಶದ ಹೆಮ್ಮೆ ರಾಷ್ಟ್ರ ದ್ವಜವನ್ನು 75 ವರ್ಷಗಳಿಂದ ಸುರಕ್ಷಿತವಾಗಿಟ್ಟುಕೊಳ್ಳುವುದು ಸುಲಭದ ಕೆಲಸವಲ್ಲ. ಗಂಗಾಧರ ಅವರು ತಮ್ಮ ಇಳಿ ವಯಸ್ಸಿನಲ್ಲಿ ಕೂಡಾ ಧ್ವಜವನ್ನು ಜೋಪಾನ ಮಾಡುತ್ತಿದ್ದಾರೆ. ಇವರಿಗೊಂದು ಸೆಲ್ಯೂಟ್ ಹೇಳಲೇಬೇಕು...

Last Updated : Aug 14, 2021, 8:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.