ಹುಬ್ಬಳ್ಳಿ: ಅಕಾಲಿಕ ಮಳೆ ಮತ್ತು ಆನೆಕಲ್ಲು ಬಿದ್ದ ಪರಿಣಾಮ ಹಿಂಗಾರು ಬೆಳೆಗಳನ್ನು ಕಟಾವು ಮಾಡುವ ಸಂದರ್ಭದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಧಾರಾವಾಡ ಜಿಲ್ಲೆಯಲ್ಲಿ ಅಕಾಲಿಕ ಮಳೆಯಾಗಿದ್ದು, ಜೋಳ, ಕಡಲೆ, ಹತ್ತಿ, ಗೋಧಿ, ಕುಸಬಿ, ಸಜ್ಜೆ, ತೊಗರಿ ಹಾಗೂ ಮೆಣಸಿನಕಾಯಿ ಹೀಗೆ ಹತ್ತಾರು ಹಿಂಗಾರು ಬೆಳೆಗಳು ಹಾನಿಗೊಳಗಾಾಗಿವೆ. ಇದರಿಂದ ರೈತರಿಗೆ ದೊಡ್ಡ ಪ್ರಮಾಣದ ನಷ್ಟ ಸಂಭವಿಸಿದ್ದು, ಕಂಗಾಲಾಗಿದ್ದಾರೆ.
ಸಾಕಷ್ಟು ಸಾಲ ಮಾಡಿ ರೈತರು ಬೆಳೆ ಬೆಳೆದಿದ್ದರು. ಆದರೆ, ಅಕಾಲಿಕ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರುವ ಮುನ್ನ ವರುಣನ ಅವಕೃಪೆಗೆ ಒಳಗಾಗಿದೆ. ಈ ಸಂಬಂಧ ಸರ್ಕಾರ ಜಿಲ್ಲಾಧಿಕಾರಿ ಮುಖಾಂತರ ವಿಶೇಷವಾದ ಕಮಿಟಿ ರಚಿಸಿ, ಸರ್ವೆ ಮಾಡಿ ಎಕರೆಗೆ ಸುಮಾರು 60 ರಿಂದ 70 ಸಾವಿರ ರೂ. ಪರಿಹಾರ ನೀಡಬೇಕು. ಸರ್ಕಾರ ಸೂಕ್ತವಾದ ಪರಿಹಾರ ಹಣ ಕೊಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ ಒತ್ತಾಯಿಸಿದ್ದಾರೆ.