ETV Bharat / state

ಕ್ರಿಕೆಟ್ ಬೆಟ್ಟಿಂಗ್: ಐವರ ಬಂಧನ - ತನಿಖೆ ಚುರುಕುಗೊಳಿಸಿದ ಪೊಲೀಸ್​ - ಹುಬ್ಬಳ್ಳಿ ಇತ್ತೀಚಿನ ಸುದ್ದಿ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್​ ನಡೆಸುತ್ತಿದ್ದ ಖದೀಮರನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಿಂದ  ಐವರ ಬಂಧನ
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಿಂದ ಐವರ ಬಂಧನ
author img

By

Published : Oct 2, 2020, 6:14 PM IST

ಹುಬ್ಬಳ್ಳಿ: ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ಐವರನ್ನು ಬಂಧಿಸಿ 24,450 ರೂ. ನಗದು ಮತ್ತು 4 ಮೊಬೈಲ್​ಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಐಪಿಎಲ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಹಳೇ ಹುಬ್ಬಳ್ಳಿ ನೂರಾನಿ ಪ್ಲಾಟ್‌ನ ಜಾವೇದ್‌ ಅಹಮ್ಮದ್ ಸೌದಾಗರ, ಬಾಣತಿಕಟ್ಟೆಯ ಸದ್ದಾಂ ಕುಂದಗೋಳ, ರಜಿಯಾಟೌನ್‌ನ ಜಫ್ರುಲ್ಲಾ ಧಾರವಾಡ, ಹುಬ್ಬಳ್ಳಿ ಕಮರೀಪೆಟೆಯ ನಿಂಗುಸಾ ಹಬೀಬ್​ ಹಾಗೂ ದೇವಾಂಗಪೇಟೆಯ ಅಶೋಕ ಕೊಳೆಕರ ಎಂಬುವರನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಸೆ. 30ರಂದು ಹಳೇ ಹುಬ್ಬಳ್ಳಿ ಬಾಣತಿಕಟ್ಟಿ ಸರ್ಕಲ್‌ ಹತ್ತಿರದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮೊಬೈಲ್‌ ಪೋನ್‌ ಮೂಲಕ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಗಳ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಆಟದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸ್ ವಿಶೇಷ ತಂಡವು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಿಂದ  ಐವರ ಬಂಧನ
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಿಂದ ಐವರ ಬಂಧನ

ದಾಳಿಯಲ್ಲಿ ಹಳೇಹುಬ್ಬಳ್ಳಿ ಠಾಣೆ ಇನ್ಸ್​ಪೆಕ್ಟರ್‌ಗಳಾದ ಎಸ್.ಬಿ ಮಾಳಗೊಂಡ, ಎಸ್.ಎಸ್ ಕಮತಗಿ ಇವರ ನೇತೃತ್ವದಲ್ಲಿ ಪಿಎಸ್‌ಐ ಎಸ್. ಬಿ ಸಿಂಗೆ ಮತ್ತು ಸಿಬ್ಬಂದಿ ಪಿ.ಜಿ. ಪುರಾಣಿಕಮಠ, ಬಿ.ಆರ್. ಮುದೇನಗುಡಿ, ಎಸ್.ಬಿ ಮಡಿವಾಳರ, ಎನ್.ಎಂ ಪಾಟೀಲ, ಸಿ.ಎಫ್ ಅಂಬಿಗೇರ, ಎಂ.ಬಿ ಭಜಂತ್ರಿ, ವಿ.ಎಸ್ ಗುಡಗೇರಿ, ಕೆ.ಎನ್ ಮೋಟೆಬೆನ್ನೂರ, ಪಿ.ಜಿ ಹೊಸಮನಿ, ಎಮ್.ಬಿ ಪಾಟೀಲ್​​ ಭಾಗವಹಿಸಿದ್ದರು. ಈ ತಂಡಕ್ಕೆ ಹು- ಧಾ ಪೊಲೀಸ್ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.