ಹುಬ್ಬಳ್ಳಿ : ಕೊರೊನಾ ಮಹಾಮಾರಿ ವಿದೇಶಿ ಮೊಬೈಲ್ ಮಾರುಕಟ್ಟೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಹೀಗಾಗಿ ನಗರದಲ್ಲಿ ಎಲ್ಲಿ ನೋಡಿದರೂ ಗ್ರಾಹಕರಿಗೆ ತಮಗೆ ಇಷ್ಟವಾದ ಮೊಬೈಲ್ ಹಾಗೂ ಬಿಡಿ ಭಾಗಗಳು ಸಿಗುತ್ತಿಲ್ಲ. ಇನ್ನು ಕೆಲವೆಡೆ ಸಿಕ್ಕಿದರೂ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ.
ಲಾಕ್ ಡೌನ್ ಸಂಪೂರ್ಣವಾಗಿ ಸಡಿಲಿಕೆಯಾದ ಹಿನ್ನೆಲೆ ಜನರು ಮೊಬೈಲ್ ಖರೀದಿಸಲು ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಪೂರೈಕೆ ವ್ಯತ್ಯಯದಿಂದ ಇಷ್ಟವಾದ ಮೊಬೈಲ್ಗಳು ಸಿಗುತ್ತಿಲ್ಲ. ಬಹುತೇಕ ಮೊಬೈಲ್ಗಳು ವಿದೇಶಗಳಿಂದ ಬರುವುದರಿಂದ ಮೊಬೈಲ್ ಅಂಗಡಿಯವರು ಸ್ಟಾಕ್ ಇಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವೆಡೆ ಚೀನಾ ನಿರ್ಮಿತ ಮೊಬೈಲ್ ಮತ್ತು ಬಿಡಿ ಭಾಗಗಳು ಸಿಕ್ಕಿದರೂ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ 50 ರಿಂದ 100 ರೂಪಾಯಿ ಖರ್ಚು ಮಾಡಿದರೆ ರಿಪೇರಿಯಾಗುತ್ತಿದ್ದ ಮೊಬೈಲ್ಗಳಿಗೆ ಈಗ 300 ರಿಂದ 400 ವ್ಯಯಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
ಲಾಕ್ಡೌನ್ ಮುಕ್ತಾಯವಾದ ತಕ್ಷಣ ಮೊಬೈಲ್ ರಿಪೇರಿ ಮಾಡಿಸಬೇಕು ಅಥವಾ ಹೊಸ ಮೊಬೈಲ್ ಖರೀದಿಸಬೇಕು ಎಂದು ಅಂದುಕೊಂಡಿದ್ದವರು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.