ETV Bharat / state

ಧಾರವಾಡದಲ್ಲಿ ಒಂದೇ ಶಾಲೆಯ 8 ಶಿಕ್ಷಕರಿಗೆ ಕೊರೊನಾ: ಓರ್ವ ಶಿಕ್ಷಕಿಯಿಂದ ಹಬ್ಬಿದ ಸೋಂಕು! - ಧಾರವಾಡ ಕೊರೊನಾ ಲೆಟೆಸ್ಟ್​ ನ್ಯೂಸ್​

ಧಾರವಾಡದಲ್ಲೂ ಮಹಾಮಾರಿ ಕೊರೊನಾ ರಣಕೇಕೆ ಹಾಕುತ್ತಿದೆ. ನಗರದ ಪ್ರತಿಷ್ಠಿತ ಖಾಸಗಿ ಹೈಸ್ಕೂಲ್​ವೊಂದರ 8 ಮಂದಿ ಶಿಕ್ಷಕರಿಗೆ ಮಹಾಮಾರಿ ತಗುಲಿದೆ. ಸೋಂಕಿತ ಶಿಕ್ಷಕಿ ಶಾಲಾ ಆರಂಭ ಪೂರ್ವ ಸಭೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಈಗ ಉಳಿದ ಶಿಕ್ಷಕರಿಗೂ ಸೋಂಕು ಹರಡಿದೆ.

Corona positive to 8 teachers in Dharwad
ಒಂದೇ ಶಾಲೆಯ 8 ಶಿಕ್ಷಕರಿಗೆ ಸೋಂಕು
author img

By

Published : Jun 15, 2020, 10:15 AM IST

ಧಾರವಾಡ: ನಗರದಲ್ಲಿ ಒಂದೇ ಶಾಲೆಯ 8 ಜನ ಶಿಕ್ಷಕರಿಗೆ ಸೋಂಕು ಕಾಣಿಸಿಕೊಂಡಿದೆ. ಓರ್ವ ಶಿಕ್ಷಕಿಯಿಂದ ಏಳು ಜನ ಶಿಕ್ಷಕರಿಗೆ ಈ ಮಹಾಮಾರಿ ವಕ್ಕರಿಸಿದೆ.

ನಗರದ ಪ್ರತಿಷ್ಠಿತ ಖಾಸಗಿ ಹೈಸ್ಕೂಲ್​ವೊಂದರ ಶಿಕ್ಷಕರು ಇವರಾಗಿದ್ದಾರೆ. ಶಾಲೆಯ ಆರಂಭ ಕುರಿತು ನಡೆಸಿದ ಪೂರ್ವ ಸಭೆಯಲ್ಲಿ ಸೋಂಕಿತ ಶಿಕ್ಷಕಿಯೊಬ್ಬರು ಪಾಲ್ಗೊಂಡಿದ್ದರಿಂದ ಈಗ ಉಳಿದ ಶಿಕ್ಷಕರಿಗೆ ಕಂಟಕವಾಗಿದೆ. ಶಿಕ್ಷಕಿಗೆ (ಪಿ-5970) ಜೂ. 11 ರಂದು ಜ್ವರ, ನೆಗಡಿ, ಕೆಮ್ಮಿನ ಹಿನ್ನೆಲೆ ತಪಾಸಣೆ ನಡೆಸಿದಾಗ ಸೋಂಕು ಇರುವುದು ದೃಢವಾಗಿತ್ತು. ಈಕೆಯ ಸಂಪರ್ಕಕ್ಕೆ ಬಂದ ಪತಿ ಸಹಿತ ಏಳು ಶಿಕ್ಷಕರಿಗೂ ಈಗ ಸೋಂಕು ದೃಢಪಟ್ಟಿದೆ.

54 ವರ್ಷದ ಪುರುಷ, ಪಿ-6833, 30 ವರ್ಷದ ಮಹಿಳೆ, ಪಿ-6834, 46 ವರ್ಷದ ಮಹಿಳೆ, ಪಿ-6835, 49 ವರ್ಷದ ಮಹಿಳೆ, ಪಿ-6836, 26 ವರ್ಷದ ಮಹಿಳೆ, ಪಿ-6837, 39 ವರ್ಷದ ಮಹಿಳೆ, ಪಿ-6841, 35 ವರ್ಷದ ಮಹಿಳೆ, ಪಿ-6842 ಈ ಎಲ್ಲರೂ ಸೋಂಕಿತ ಶಿಕ್ಷಕಿಯ‌ ಸಂಪರ್ಕಕ್ಕೆ ಬಂದವರಾಗಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ನಗರದ ವಿವಿಧ ಕಾಲೋನಿಗಳನ್ನು ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದೆ. ಜೂನ್​ 12 ರಂದು 34 ವರ್ಷದ ಪತಿ, ಪಿ-6260 ಸೋಂಕು ತಗುಲಿತ್ತು. ಇದರಿಂದ ಧಾರವಾಡ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.