ಧಾರವಾಡ: ಕೊರೊನಾ ವೈರಸ್ ಸರ್ಕಾರಿ ಕಚೇರಿಗಳ ಬೆನ್ನತ್ತಿದೆ. ಇದೀಗ ಎಸ್ಪಿ ಕಚೇರಿಯ ಸಿಬ್ಬಂದಿಯೋರ್ವರಿಗೆ ವೈರಸ್ ತಗುಲಿದೆ. ಇದರಿಂದ ಬಹುತೇಕ ಕಚೇರಿಗಳಿಗೆ ಕೊರೊನಾ ಲಗ್ಗೆ ಇಟ್ಟಂತಾಗಿದೆ.
ಎಸ್ಪಿ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಉಳಿದ ಸಿಬ್ಬಂದಿಗೆ ಎಸ್ಪಿ ವರ್ತಿಕಾ ಕಟಿಯಾರ್ ಎರಡು ದಿನ ಕಚೇರಿಗೆ ಬರದಂತೆ ಸೂಚನೆ ನೀಡಿದ್ದಾರೆ. ಕಚೇರಿಯನ್ನು ಸ್ಯಾನಿಟೈಸ್ ಮಾಡಿಸಿದ್ದಾರೆ.
ಕಚೇರಿಯ ಕಂಟ್ರೋಲ್ ರೂಮ್ನ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗುವಂತೆ ಎಸ್ಪಿ ಸೂಚನೆ ನೀಡಿದ್ದಾರೆ. ಇದರಿಂದ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದು, ಅವರ ವರದಿ ನೆಗೆಟಿವ್ ಬಂದಿದೆ. ಆದರು ಮೂರು ದಿನಗಳ ಕಾಲ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.