ಹುಬ್ಬಳ್ಳಿ: ಝೇಂಕಾರ್ ಸಂಘ ಜಿಲ್ಲಾಡಳಿತ ಸಂಯುಕ್ತ ಆಶ್ರಯದಲ್ಲಿ "ಕೊರೊನಾ ಕೂಗು" ಕಿರುಚಿತ್ರ ನಿರ್ಮಾಣ ಮಾಡಿರುವ ಕಲಾವಿದರ ತಂಡ ಈ ಮೂಲಕ ಜಿಲ್ಲೆಯಾದ್ಯಂತ ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಕಲಘಟಗಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಿರುಚಿತ್ರ ಚಿತ್ರೀಕರಣ ಮಾಡಿರುವ ಕಲಾವಿದರು, ಹಳ್ಳಿಗಳಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಈ ಕಿರು ಚಿತ್ರದಲ್ಲಿ ಎರಡು ಹಾಡುಗಳಿದ್ದು, ಅವುಗಳು ಕೂಡಾ ಕೊರೊನಾ ಕುರಿತು ಹಾಗೂ ಕೊರೊನಾ ವಿರುದ್ಧ ಹಗಲಿರುಳು ಹೋರಾಟ ನಡೆಸಿರುವ ವಾರಿಯರ್ಸ್ ಕುರಿತು ಸಾಹಿತ್ಯ ರಚನೆ ಮಾಡಲಾಗಿದೆ.
ಕಿರು ಚಿತ್ರದಲ್ಲಿ ಹತ್ತಕ್ಕೂ ಹೆಚ್ಚು ಕಲಾವಿದರು ನಟನೆ ಮಾಡಿದ್ದಾರೆ. ಅಂಜಬೇಡಿ ಅಳಕಬೇಡಿ.. ಮಾಸ್ಕ್ ಧರಿಸಿದೇ ಹೊರ ಹೋಗಬೇಡಿ, ಕೊರೊನಾ ಅಲ್ಲಾ ಅಪಾಯ ಮಾಡಿ ಕುಡಿರಿ ಕಷಾಯ, ಇದು ನಮ್ಮ ದೇಹಕ್ಕೆ ಸಹಾಯ.. ಎಂಬ ಜಾನಪದ ಹಾಡಿಗೆ ವಿಭಿನ್ನವಾಗಿ ನಟನೆ ಮಾಡುವ ಮೂಲಕ ಕೊರೊನಾ ಜಾಗೃತಿ ಮೂಡಿಸಿದ್ದಾರೆ. ಈ ಕಿರುಚಿತ್ರ ವೀಕ್ಷಿಸಿದ ಜಿಲ್ಲಾಡಳಿತ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತವಾಗಿದೆ.