ಹುಬ್ಬಳ್ಳಿ: ಕೊರೊನಾ ಸೋಂಕಿತ ವ್ಯಕ್ತಿಯೋರ್ವ ರಾತ್ರಿಯಿಂದ ಆಂಬ್ಯುಲೆನ್ಸ್ ಸಿಗದೆ ಪರದಾಡುತ್ತಿರುವ ಘಟನೆ ನಗರದಲ್ಲಿ ನಡೆದಿದೆ.
ಕಳೆದ ರಾತ್ರಿಯಿಂದ ಆಂಬ್ಯುಲೆನ್ಸ್ಗಾಗಿ ಕಾಯುತ್ತಿದ್ದು, ಇಲ್ಲಿಯವರೆಗೂ ಬಂದಿಲ್ಲ. ಈ ಕುರಿತು ಪೊಲೀಸರ ಬಳಿ ಸಹಾಯ ಕೇಳಿದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸೋಂಕಿತ ವ್ಯಕ್ತಿ ಅಳಲು ತೋಡಿಕೊಂಡಿದ್ದಾನೆ.
ಈತ ಚೆನ್ನಮ್ಮ ಸರ್ಕಲ್ ಬಳಿಯೇ ಓಡಾಡುತ್ತಿದ್ದು, ಹಳೇ ಬಸ್ ನಿಲ್ದಾಣ ಬಳಿಯ ಲಾಡ್ಜ್ನಲ್ಲಿ ತಂಗಿದ್ದಾನೆ ಎನ್ನಲಾಗಿದೆ.