ಧಾರವಾಡ: ಬೀದಿ ಬದಿ ವ್ಯಾಪಾರಸ್ಥರು ಲಾಕ್ಡೌನ್ ಸಡಿಲಿಕೆ ಬಳಿಕ ಕೊಂಚ ಮಟ್ಟಿಗೆ ಆರ್ಥಿಕವಾಗಿ ಸುಧಾರಣೆಯತ್ತಾ ನಡಿಗೆ ಸಾಗಿಸುತ್ತಿದ್ದಾರೆ. ಆದರೆ ಬಂಡವಾಳ ಹೂಡಲು ಕಾಸಿಲ್ಲದೆ ದುಡಿಮೆ ನಂಬಿ ಜೀವನ ಸಾಗಿಸುವ ಕೆಲ ಬಡ ಕುಟುಂಬಗಳು, ಅದರಲ್ಲೂ ದುಡಿಯಲು ಆಗದ ಹಿರಿಯ ಜೀವಗಳ ಸ್ಥಿತಿಯಂತೂ ಅತಂತ್ರವಾಗಿದೆ.
ಹೀಗಾಗಿ ಮನೆಯ ಸಂಸಾರ ಸಾಗಿಸಲು ಹಿರಿಯ ಜೀವಗಳು ಭಿಕ್ಷಾಟನೆಗೆ ಇಳಿದಿದ್ದಾರೆ. ನಗರದ ಕೆಲ ಜನದಟ್ಟಣೆಯ ಪ್ರದೇಶಗಳಾದ ಮಿನಿ ವಿಧಾನಸೌಧ, ಕೋರ್ಟ್ ಸರ್ಕಲ್ ಹಾಗೂ ಬಸ್ ನಿಲ್ದಾಣಗಳಲ್ಲಿ ಹಿರಿಯ ಜೀವಗಳು ಸ್ವಾಭಿಮಾನದ ಹಂಗು ತೊರೆದು, ಭಿಕ್ಷೆ ಬೇಡುವ ದೃಶ್ಯ ಕಂಡುಬಂತು.
ವೃದ್ಧಾಪ್ಯ ವೇತನ:
ಕೇಂದ್ರ ಸರ್ಕಾರ ವೃದ್ಧಾಪ್ಯ ವೇತನ, ವಿದವಾ ವೇತನ ಸೇರಿದಂತೆ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಆದ್ರೆ ಈ ಯೋಜನೆಗಳು ಸಕಾಲಕ್ಕೆ ಸಿಗದ ಪರಿಣಾಮ ಹಿರಿಯ ಜೀವಗಳು ಭಿಕ್ಷೆ ಬೇಡುವ ಪರಿಸ್ಥಿತಿ ಬಂದೊದಗಿದೆ.