ETV Bharat / state

ಭೂ ದಾಖಲೆಗಳ ಪೂರೈಸದ ಸಹಾಯಕ ನಿರ್ದೇಶಕರಿಗೆ ದಂಡ ವಿಧಿಸಿದ ಗ್ರಾಹಕ ಆಯೋಗ

ದೂರುದಾರರು ಕೇಳಿರುವ ದಾಖಲೆಗಳ ದೃಢಿಕೃತ ಪ್ರತಿಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಒದಗಿಸುವಂತೆ ಆದೇಶಿಸಿರುವ ಗ್ರಾಹಕರ ಆಯೋಗ 25,000 ರೂ. ದಂಡ ವಿಧಿಸಿದೆ.

Consumer Commission
ಗ್ರಾಹಕರ ಆಯೋಗ
author img

By

Published : Dec 23, 2022, 7:15 AM IST

ಧಾರವಾಡ: ತಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಮಹಿಳೆಯೊಬ್ಬರು ಅರ್ಜಿ ಸಲ್ಲಿದ್ದರೂ, ದಾಖಲೆಗಳನ್ನು ಪೂರೈಸದೇ ಇದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಧಾರವಾಡದ ವೀರ ಸೋಮೇಶ್ವರ ನಗರದ ನಿವಾಸಿ ಸುನಿತಾ ಭಂಗೀಗೌಡರ ಎಂಬುವವರು ತನಗೆ ಸೇರಿದ ಹುಬ್ಬಳ್ಳಿ ನಗರದ ಯಲ್ಲಾಪೂರ ಎಮ್ ಗ್ರಾಮದ, ವಾರ್ಡ ನಂ.2, ಸರ್ವೇ ನಂ.7/ಎ, ಹಿಸ್ಸಾ ನಂ.16 ರಲ್ಲಿ ಇರುವ ತನ್ನ 5 ಫ್ಲ್ಯಾಟ್​ಗಳ ನಕಾಶೆ, ವರದಿ ಮತ್ತು ಇತರ ದಾಖಲೆಗಳನ್ನು ಪೂರೈಸಲು ಅಗತ್ಯ ಶುಲ್ಕ ಭರಿಸಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ನಗರ ಮೋಜಣಿ ತಹಶೀಲ್ದಾರ ಕಚೇರಿ, ಮಿನಿ ವಿಧಾನಸೌದ ಹುಬ್ಬಳ್ಳಿ ಇವರಲ್ಲಿ ಕೋರಿದ್ದರು.

ಆದರೆ ಒಂದು ವರ್ಷ ಕಳೆದರೂ ತಾನು ಕೇಳಿದ ದಾಖಲೆಗಳನ್ನು ನೀಡದೇ ಅವರು ಕರ್ತವ್ಯಲೋಪ ಎಸಗಿ ತನಗೆ ಸತಾಯಿಸುತ್ತಿರುವುದಾಗಿ ಮತ್ತು ಸೇವಾನ್ಯೂನತೆ ಎಸಗಿದ್ದಾರೆ ಎಂದು ಹುಬ್ಬಳ್ಳಿಯ ಭೂದಾಖಲೆಗಳ ಸಹಾಯಕ ನಿರ್ದೇಶಕರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಫಿರ್ಯಾದುದಾರರು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ದೂರುದಾರರಿಂದ ಅಗತ್ಯ ಶುಲ್ಕ ಭರಿಸಿಕೊಂಡು ಅವರಿಗೆ ದಾಖಲೆಗಳನ್ನು ಪೂರೈಸುವುದು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕರ್ತವ್ಯವಾಗಿದೆ. ಆದರೆ ತಮ್ಮ ಕರ್ತವ್ಯ ಪಾಲನೆಯಲ್ಲಿ ಅವರು ವಿಫಲರಾಗಿ ಗ್ರಾಹಕರ ರಕ್ಷಣಾಕಾಯ್ದೆ 2019ರ ಅಡಿ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ದೂರುದಾರರು ಕೇಳಿರುವ ದಾಖಲೆಗಳ ದೃಢಿಕೃತ ಪ್ರತಿಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಒದಗಿಸುವಂತೆ ಆದೇಶಿಸಿದೆ. ಸೇವಾ ನ್ಯೂನತೆಯಿಂದ ಫಿರ್ಯಾದಿದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ರೂ.20,000 ಪರಿಹಾರ ಹಾಗೂ ರೂ.5,000 ಪ್ರಕರಣದ ಖರ್ಚನ್ನು 30 ದಿವಸಗಳ ಒಳಗಾಗಿ ನೀಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

ಇದನ್ನೂ ಓದಿ: ಜಿಪಂ - ತಾಪಂ ಕ್ಷೇತ್ರ ಮರು ವಿಗಂಡಣೆಗೆ ರಾಜ್ಯ ಸರ್ಕಾರದ ವಿಳಂಬ: 5 ಲಕ್ಷ ರೂ ದಂಡ ವಿಧಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.