ETV Bharat / state

ಪಾಸಿಟಿವಿಟಿ ದರ ಕಡಿಮೆಯಿದ್ದರೂ ಅನ್​ಲಾಕ್ ಆಗದ ಧಾರವಾಡ: ಗೊಂದಲಕ್ಕೀಡಾದ ಜನ

ಪಾಸಿಟಿವಿಟಿ ದರ ಶೇ. 5ಕ್ಕಿಂತ ಕೆಳಗಿರುವ ಎಲ್ಲಾ ಜಿಲ್ಲೆಗಳನ್ನು ಸರ್ಕಾರ ಅನ್​ಲಾಕ್​ ಮಾಡಿದೆ. ನಾಳೆಯಿಂದ ಈ ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಲಿದೆ. ಆದರೆ, ಪಾಸಿಟಿವಿಟಿ ದರ ಕಡಿಮೆಯಿದ್ದರೂ ಅನ್​ಲಾಕ್​ ಪಟ್ಟಿಯಿಂದ ಧಾರವಾಡವನ್ನು ಕೈ ಬಿಡಲಾಗಿದೆ.

Confusion over Dharwad Unlock
ಅನ್​ಲಾಕ್ ಆಗದ ಧಾರವಾಡ
author img

By

Published : Jun 20, 2021, 10:16 AM IST

ಹುಬ್ಬಳ್ಳಿ: ಕಳೆದೊಂದು ವಾರದಿಂದ ಧಾರವಾಡ ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ದರ ಶೇ.4.1 ರ ಆಸುಪಾಸಿನಲ್ಲಿದ್ದರೂ ಅನ್​ಲಾಕ್​ ಆದ ಜಿಲ್ಲೆಗಳ ಪಟ್ಟಿಯಿಂದ ಹೊರಗಿಟ್ಟಿರುವುದು ಜನರ ಗೊಂದಲಕ್ಕೆ ಕಾರಣವಾಗಿದೆ. ಅನ್​ಲಾಕ್​ 2.0 ಘೋಷಣೆ ಮಾಡುವಾಗ ಸಿಎಂ ಬಿ.ಎಸ್​ ಯಡಿಯೂರಪ್ಪ 16 ಜಿಲ್ಲೆಗಳ ಪಟ್ಟಿ ಓದಿದ್ದರು. ಅದರಲ್ಲಿ ಧಾರವಾಡ ಇರಲಿಲ್ಲ.

ಅನ್​ಲಾಕ್​ ಘೋಷಣೆ ಮಾಡುವಾಗ ಸಿಎಂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಧಾರವಾಡ ಜಿಲ್ಲೆಯಲ್ಲಿ ಸೋಂಕು ಕಡಿಮೆಯಾಗಿರುವ ಬಗ್ಗೆ ಡಿಸಿ ಸಿಎಂಗೆ ಮಾಹಿತಿ ನೀಡಿದ್ದರು. ಆದರೂ, ಸಿಎಂ ಅನ್​ಲಾಕ್​ ಜಿಲ್ಲೆಗಳ ಪಟ್ಟಿಯಲ್ಲಿ ಸೇರಿಸದಿರುವುದು, ಜಿಲ್ಲೆಯ ಜನ ಗೊಂದಲಕ್ಕೆ ಒಳಗಾಗುವಂತೆ ಮಾಡಿದೆ.

Confusion over Dharwad Unlock
ಧಾರವಾಡ ಜಿಲ್ಲೆಯ ಒಂದು ವಾರದ ಕೋವಿಡ್ ಪಾಸಿಟಿವಿಟಿ ದರ

ಸಿಎಂ ಜಿಲ್ಲೆಗಳ ಹೆಸರು ಓದುವಾಗಿ ಏನೋ ತಪ್ಪಾಗಿ ಧಾರವಾಡದ ಹೆಸರು ಕೈಬಿಟ್ಟಿರಬಹುದು. ಜಿಲ್ಲೆಯಲ್ಲಿ ಅನ್​ಲಾಕ್ ಮಾಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಪಾಸಿಟಿವಿಟಿ ದರದ ಬಗ್ಗೆ ಸರ್ಕಾರಕ್ಕೆ ಮತ್ತೊಮ್ಮೆ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಅಧಿಕಾರಿಗಳು ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ: ಧಾರವಾಡ ಜಿಲ್ಲಾಧಿಕಾರಿ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.