ಹುಬ್ಬಳ್ಳಿ: ಸಾರಿಗೆ ಬಸ್ ನಿರ್ವಾಹಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಬಂಡಿವಾಡ ಗ್ರಾಮದಲ್ಲಿ ನಡೆದಿದೆ.
ಮೌಲಾಸಾಬ್ ದಾವಲಸಾಬ್ ಮಿಶ್ರಿಕೋಟಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕೆಲಸದಿಂದ ಅಮಾನತುಗೊಂಡಿದ್ದ. ಅಲ್ಲದೇ ಬೈಕ್ ಕಳ್ಳತನ ಪ್ರಕರಣದ ಆರೋಪದಲ್ಲಿ ಮನನೊಂದು ಮೌಲಾಸಾಬ್ ಗ್ರಾಮದ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿಗೆ ನಿಖರವಾದ ಮಾಹಿತಿ ತನಿಖೆಯ ನಂತರವೇ ಗೊತ್ತಾಗಬೇಕಿದೆ.