ETV Bharat / state

ಮಾಜಿ ಸಚಿವ ವಿನಯ ಕುಲಕರ್ಣಿಗೆ ಅನಾಮಧೇಯ ಪತ್ರ: ದೂರು ದಾಖಲಿಸಿದ ಪತ್ನಿ ಶಿವಲೀಲಾ

ಧಾರವಾಡ ಉಪನಗರ ಠಾಣೆ ಎದುರು ಜಮಾಯಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಪುತ್ರಿ ವೈಶಾಲಿ ಅನಾಮಧೇಯ ಪತ್ರ ಬರೆಯುವವರನ್ನು ಬಂಧಿಸುವಂತೆ ಒತ್ತಾಯಿಸಿದರು.

ಕಾಂಗ್ರೆಸ್ ಗ್ರಾಮೀಣ ಘಟಕದಿಂದ ಪ್ರತಿಭಟನೆ
ಕಾಂಗ್ರೆಸ್ ಗ್ರಾಮೀಣ ಘಟಕದಿಂದ ಪ್ರತಿಭಟನೆ
author img

By

Published : Dec 16, 2022, 3:27 PM IST

Updated : Dec 16, 2022, 3:33 PM IST

ಮಾಜಿ ಸಚಿವ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಮಾತನಾಡಿದರು

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಗೆ ಅನಾಮಧೇಯ ಪತ್ರ ಬಂದ ಹಿನ್ನೆಲೆ ಕಾಂಗ್ರೆಸ್ ಗ್ರಾಮೀಣ ಘಟಕವು ಧಾರವಾಡ ಉಪನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ದೂರು ದಾಖಲಿಸಲಾಯಿತು.

ಉಪನಗರ ಠಾಣೆ ಎದುರು ಜಮಾಯಿಸಿದ ವಿನಯ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಪುತ್ರಿ ವೈಶಾಲಿ ಪ್ರತಿಭಟನೆಗೆ ಸಾಥ್ ನೀಡಿ, ಅನಾಮಧೇಯ ಪತ್ರ ಬರೆಯುವವರನ್ನ ಬಂಧಿಸುವಂತೆ ಒತ್ತಾಯಿಸಿದರು. ಅನಾಮಧೇಯ ಶಕ್ತಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ವಿನಯ ಪತ್ನಿ ಶಿವಲೀಲಾ ಮಾತನಾಡಿ, 2018-19ರ ಚುನಾವಣೆ ಮುಂಚಿತಾಗಿಯೂ ಇದೇ ರೀತಿಯ ಅನಾಮಧೇಯ ಪತ್ರ ಬರುತ್ತಿದ್ದವು. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಆಡಿಯೋಗಳಲ್ಲಿ ನಮ್ಮ ವಿರೋಧಿ ಬಣದ ಜನರಿದ್ದಾರೆ ಎಂದೂ ಹೇಳುತ್ತಿದ್ದರು. ಈ ಹಿಂದೆ ಒಂದು ಚೀಲದಷ್ಟು ಡಿಸಿಪಿಯವರಿಗೆ ಪತ್ರಗಳನ್ನು ಕೊಟ್ಟಿದ್ದೇವೆ ಎಂದರು.

ಅನಾಮಧೇಯ ಪತ್ರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿರುವುದು

ಈಗ ನಾವು ಸಿಬಿಐ ಕೇಸ್ ಎದುರಿಸುತ್ತಿದ್ದೇವೆ. ಅದರಲ್ಲಿ ಕೂಡ ಈ ಪತ್ರದಲ್ಲಿರುವ ಕೆಲವು ವಿಷಯಗಳನ್ನು ಪರಿಗಣಿಸಲಾಗಿದೆ. ನಾಲ್ಕೂವರೆ ವರ್ಷಗಳಿಂದ ಯಾವುದೇ ಪತ್ರ ಬಂದಿರಲಿಲ್ಲ. ಈಗ ಕಳೆದ ನಾಲ್ಕು ದಿನಗಳ ಹಿಂದೆ ನನ್ನ ಮತ್ತು ನನ್ನ ಪತಿಯ ಹೆಸರಿನಲ್ಲಿ ಪತ್ರಗಳು ಬಂದಿವೆ. ಕೈಯಿಂದ ಬರೆದ ಪತ್ರಗಳನ್ನು ಹಾಕಲಾಗಿದೆ. ಪತ್ರದಲ್ಲಿ ನಿಮ್ಮ ಮೇಲೆ ಇನ್ನೊಂದು ಕೇಸ್ ಹಾಕುತ್ತೇವೆ. ನಿಮ್ಮನ್ನು ಮತ್ತೆ ಜೈಲಿಗೆ ಹಾಕುತ್ತೇವೆ ಎಂದು ಉಲ್ಲೇಖಿಸಲಾಗಿದೆ. ಮುರುಘಾಮಠದ ಶಿವಯೋಗಿ ಸ್ವಾಮೀಜಿ ನಿಧನರಾಗಿದ್ದಾರೆ. ಆ ಕೇಸ್‌ನಲ್ಲಿ ನಿಮ್ಮನ್ನು ಸಿಲುಕಿಸುತ್ತೇವೆ ಎಂದು ಉಲ್ಲೇಖಿಸಿದ್ದಾರೆ ಎಂದು ವಿವರಿಸಿದರು.

ಸಿಎಂಗೆ ದೂರು ಕೊಟ್ಟಿದ್ದೇವೆ: ಫೀಲ್ಡಿಗಿಳಿದು ನಾವು ಕೆಲಸ ಮಾಡುತ್ತೇವೆ. ಇಂಥದ್ದಕ್ಕೆ ನಾವು ಹೆದರುವುದಿಲ್ಲ. ಪದೆ ಪದೇ ಸುಳ್ಳು ಅಪವಾದ ಮಾಡಿ ನಮ್ಮನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಕುಗ್ಗುವುದಿಲ್ಲ. ಪೊಲೀಸರಿಗೆ, ಸಿಎಂಗೆ ದೂರು ಕೊಟ್ಟಿದ್ದೇವೆ. ಪತ್ರದಲ್ಲಿ ಯಾರ ಹೆಸರೂ ಬಿಟ್ಟುಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಓದಿ: ಆತಂಕ ಮೂಡಿಸಿದ್ದ ಅನಾಮಧೇಯ ಪತ್ರ : ತನಿಖೆಗೆ ಮುಂದಾದಾಗ ಗೊತ್ತಾಯ್ತು ಪರಸ್ತ್ರೀ ಮೋಹ

Last Updated : Dec 16, 2022, 3:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.