ಹುಬ್ಬಳ್ಳಿ: ನಗರದಲ್ಲಿ ಅನೇಕ ಜನರಿಗೆ ಲೋನ್ ಕೊಡಿಸುವುದಾಗಿ ವಂಚನೆ ಮಾಡಿರುವ ಆರೋಪದಡಿ ಕಾಂಗ್ರೆಸ್ ನಾಯಕಿ ಎಂದು ಗುರುತಿಸಿಕೊಂಡಿರುವ ಪೂರ್ಣಿ ಸವದತ್ತಿ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಜನತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಕಪ್ಪು ಹಣವನ್ನ ನಾವೂ ಲೋನ್ ಮುಖಾಂತರ ಕೊಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತ ಜನರನ್ನ ವಂಚನೆ ಮಾಡಿರುವ ಮಹಿಳೆ ವಿದ್ಯಾರ್ಥಿ ಜೊತೆ ಮಾತನಾಡಿರುವ ಆಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಪಕ್ಷದ ಪ್ರಮುಖರೊಂದಿಗೆ ಕಾಣಿಸಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಪ್ಪು ಹಣವನ್ನು ನಾವು ಲೋನ್ ಮುಖಾಂತರ ಕೊಡುತ್ತಿದ್ದೇವೆ ಎಂದು ನಂಬಿಸುವ ಆಡಿಯೋ ಸಖತ್ ಸದ್ದು ಮಾಡಿದ್ದು, ಬಡವರನ್ನ ಕಣ್ಣೀರಿಡುವಂತೆ ಮಾಡಿರುವ ಮಹಿಳೆಯ ವಿರುದ್ಧ ಈಗ ದೂರು ದಾಖಲಾಗಿದೆ.
ಕಾಂಗ್ರೆಸ್ ನಾಯಕಿ ಎಂದು ಬಡವರ ಹಣ ದೋಚಿರುವ ಈಕೆ ವಿರುದ್ಧ ಸದ್ಯ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.