ETV Bharat / state

ಹುಬ್ಬಳ್ಳಿಯಲ್ಲಿ ನ್ಯಾಯವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿದ ಸಿಎಂ.. ಪೊಲೀಸ್​ ತನಿಖಾ ಕಾರ್ಯಕ್ಕೆ ವೇಗ - ನಾರ್ಕೊಟಿಕ್ ಪತ್ತೆ ವಿಭಾಗ ಸ್ಥಾಪನೆ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿಕೆ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಬಡವರು, ನಿರುದ್ಯೋಗಿಗಳಿಗೆ ಹಲವು ಸೌಕರ್ಯಗಳ ಅನುಷ್ಠಾನ, ಆರೋಗ್ಯ, ಶಿಕ್ಷಣ ಅಭಿವೃದ್ಧಿಗೆ ಘೋಷಿಸಿರುವ ಸಂಸ್ಥೆಗಳ ಕಾರ್ಯಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Regional Science Laboratory Inauguration
ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ
author img

By

Published : Mar 6, 2022, 5:32 PM IST

ಹುಬ್ಬಳ್ಳಿ: ಇಲ್ಲಿ ಸ್ಥಾಪನೆಯಾಗಿರುವ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಡಿಎನ್‌ಎ, ಸೈಬರ್, ಆಡಿಯೋ-ವಿಡಿಯೋ, ಮೊಬೈಲ್ ಫೋರೆನ್ಸಿಕ್ ಹಾಗೂ ಭೌತಶಾಸ್ತ್ರ ವಿಭಾಗಗಳಿವೆ. ಶೀಘ್ರದಲ್ಲಿಯೇ ನಾರ್ಕೊಟಿಕ್ ಪತ್ತೆ ವಿಭಾಗ ಪ್ರಾರಂಭಿಸಲಾಗುವುದು. ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲಾ ಕಾರ್ಯಕ್ರಮಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಿಎಂ ಬಸವರಾಜ್​ ಬೊಮ್ಮಾಯಿ ಮಾತನಾಡಿದರು

ಗೋಕುಲ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಅಪರಾಧ ಶೋಧನೆಯಲ್ಲಿ ನ್ಯಾಯವಿಜ್ಞಾನ ಪ್ರಯೋಗಾಲಯಗಳ ವರದಿಗಳು ಬಹಳ ಮಹತ್ವ ಹೊಂದಿವೆ ಎಂದರು.

ಈ ಹಿಂದೆ ಬೆಂಗಳೂರಿನ ಪ್ರಯೋಗಾಲಯದಿಂದ ವರದಿಗಳು ದೊರೆಯಲು 2 ರಿಂದ ಎರಡೂವರೆ ವರ್ಷಗಳ ಕಾಲಾವಧಿ ಬೇಕಾಗುತ್ತಿತ್ತು. ಈಗ ಸೈಬರ್ ಶೋಧನೆ ವಿಭಾಗ ಅಭಿವೃದ್ಧಿಪಡಿಸಿದ ನಂತರ ಮೂರು ತಿಂಗಳೊಳಗೆ ವರದಿಗಳು ಬರುತ್ತಿವೆ. ಡಿಜಿಟಲ್ ಜಾಲಗಳ ಮೂಲಕ ನಡೆಯುವ ಅಪರಾಧಗಳನ್ನು ತ್ವರಿತವಾಗಿ ಪತ್ತೆ ಮಾಡಲಾಗುತ್ತಿದೆ. ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಂಚಿಸಲು ಯತ್ನಿಸುವ ಪ್ರಕರಣಗಳನ್ನು ರಾಜ್ಯದಲ್ಲಿ ನಿಯಂತ್ರಿಸಲಾಗಿದೆ ಎಂದು ತಿಳಿಸಿದರು.

cm bommai with prahlad joshi
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆ ಸಿಎಂ ಬೊಮ್ಮಾಯಿ

ಹುಬ್ಬಳ್ಳಿಯಲ್ಲಿ ಪ್ರಾರಂಭವಾಗಿರುವ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯಲದಲ್ಲಿ ಡಿಎನ್‌ಎ, ಕಂಪ್ಯೂಟರ್, ಮೊಬೈಲ್, ಆಡಿಯೋ-ವಿಡಿಯೋ ಫಾರೆನ್ಸಿಕ್ ಹಾಗೂ ಭೌತಶಾಸ್ತ್ರ ವಿಭಾಗಗಳಿವೆ. ಶೀಘ್ರದಲ್ಲಿಯೇ ನಾರ್ಕೊಟಿಕ್ ಪತ್ತೆ ವಿಭಾಗ ಪ್ರಾರಂಭಿಸಲಾಗುವುದು. ಇಲ್ಲಿ ಈಗಾಗಲೇ 20 ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಬಜೆಟ್ ಘೋಷಣೆಗಳು ನಿಗದಿತ ಅವಧಿಯಲ್ಲಿ ಅನುಷ್ಠಾನ.. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಬಡವರು, ನಿರುದ್ಯೋಗಿಗಳಿಗೆ ಹಲವು ಸೌಕರ್ಯಗಳ ಅನುಷ್ಠಾನ, ಆರೋಗ್ಯ, ಶಿಕ್ಷಣ ಅಭಿವೃದ್ಧಿಗೆ ಘೋಷಿಸಿರುವ ಸಂಸ್ಥೆಗಳ ಕಾರ್ಯಾರಂಭ ಮಾಡಲಾಗುವುದು. ಧಾರವಾಡ-ಕಿತ್ತೂರು-ಬೆಳಗಾವಿ ರೈಲು ಮಾರ್ಗ ಶೀಘ್ರ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಕಾರವಾರದಲ್ಲಿ ಬಂದರುಗಳು ಅಭಿವೃದ್ಧಿ ಹೊಂದುತ್ತಿವೆ. ಸಂಪರ್ಕಕ್ಕೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಅಗತ್ಯವಾಗಿದೆ. ಈ ಕುರಿತ ಪರಿಸರದ ಸವಾಲುಗಳನ್ನು ಇದೇ ವರ್ಷದಲ್ಲಿ ಪರಿಹರಿಸಿಕೊಂಡು ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರವನ್ನು ನುರಿತ ತಜ್ಞರು ಹಾಗೂ ಅತ್ಯಾಧುನಿಕ ವೈಜ್ಞಾನಿಕ ಸೌಕರ್ಯಗಳೊಂದಿಗೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿಯ ಆರ್​ಎಫ್​ಎಸ್​ಎಲ್​ ಬೆಂಗಳೂರು, ಹೈದರಾಬಾದ್ ಸಂಸ್ಥೆಯ ಮಟ್ಟಕ್ಕೆ ಏರಿಸಬೇಕು‌- ಸಚಿವ ಜೋಶಿ.. ತಂತ್ರಜ್ಞಾನವನ್ನು ಆಡಳಿತ ನಡೆಸುವವರಷ್ಟೇ ಅಲ್ಲ, ಆರೋಪಿಗಳು ವಿದ್ರೋಹಿಗಳೂ ಕೂಡ ಬಳಸುತ್ತಿರುವುದರಿಂದ ಪೊಲೀಸರು ತೀವ್ರ ಚಾಣಾಕ್ಷತೆಯಿಂದ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಸಮಾಜದಲ್ಲಿ ಅಪರಾಧಿಗಳ ಸಂಖ್ಯೆ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪಿಸಿ, ಅಪರಾಧ ಪತ್ತೆ ಮಾಡಲು ಮಾರ್ಗದರ್ಶನ, ತರಬೇತಿ ನೆರವು ನೀಡಲು ಪ್ರೋತ್ಸಾಹಿಸುತ್ತಿದ್ದಾರೆ. ರಾಜ್ಯದ ಸಂಶೋಧನಾ ಸಂಸ್ಥೆಗಳು, ಸಂಬಂಧಿಸಿದ ಕಾಲೇಜುಗಳ ಈ ವಿಶ್ವವಿದ್ಯಾಲಯದ ಸಂಲಗ್ನತೆ ಪಡೆಯಲು ಅವಕಾಶವಿದೆ ಎಂದರು.

ಪ್ರಯೋಗಾಲಯಗಳ ಸ್ಥಾಪನೆಯಿಂದ ಪೊಲೀಸರ ತನಿಖಾ ಕಾರ್ಯಕ್ಕೆ ವೇಗ ಸಿಗುತ್ತದೆ-ಆರಗ ಜ್ಞಾನೇಂದ್ರ.. ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ವಿಧಿ ವಿಜ್ಞಾನ ಪ್ರಯೋಗಾಲಯಗಳ ಬೆಳವಣಿಗೆಯಲ್ಲಿ ಇಂದು ರಾಜ್ಯದಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಇಂದು ಸಾಕಷ್ಟು ಪ್ರಕರಣಗಳ ಒತ್ತಡ ಇದೆ. ಸಾವಿರಾರು ಸ್ಯಾಂಪಲ್‌ಗಳು ಪ್ರಯೋಗಾಲಯದ ವರದಿ ವಿಳಂಬದ ಕಾರಣಕ್ಕಾಗಿ ಚಾರ್ಜ್ ಶೀಟ್ ಸಲ್ಲಿಕೆಯಲ್ಲಿ ತಡವಾಗಿ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತಿದೆ.

450 ವೈಜ್ಞಾನಿಕ ಅಧಿಕಾರಿಗಳು, ಸಿಬ್ಬಂದಿ ಹಾಗೂ 206 ಅಪರಾಧ ಸ್ಥಳದ ಪರಿಶೀಲನಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ನ್ಯಾಯ ವಿಜ್ಞಾನ ಪ್ರಯೋಗಾಲಯಗಳಿಗೆ 48 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಉಪಕರಣಗಳನ್ನು ಪೂರೈಸಲಾಗುತ್ತಿದೆ. ಈ ಪ್ರಯೋಗಾಲಯಗಳ ಸ್ಥಾಪನೆಯಿಂದ ಪೊಲೀಸರ ತನಿಖಾ ಕಾರ್ಯಕ್ಕೆ ವೇಗ ಸಿಗುತ್ತದೆ ಎಂದು ಹೇಳಿದರು.

ಸಿಎಂ ಬೊಮ್ಮಾಯಿಯವರಿಂದ ಪ್ರಾದೇಶಿಕ ಅಸಮಾತೋಲನ‌ ನಿವಾರಣೆ-ಹೊರಟ್ಟಿ.. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಟೀಕೆ-ಟಿಪ್ಪಣಿಗಳಿಗೆ ಹಿಂಜರಿಯದೇ ಜನಪ್ರತಿನಿಧಿಗಳು ಅಧಿಕಾರ ಸಿಕ್ಕಾಗ ತಮ್ಮ ಪ್ರದೇಶಗಳಿಗೆ ಸೌಕರ್ಯಗಳನ್ನು ನೀಡಬೇಕು‌. ಮುಖ್ಯಮಂತ್ರಿಯವರಿಗೆ ಸ್ವತಃ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಅರಿವು ಇರುವುದರಿಂದ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಬಜೆಟ್‌ನಲ್ಲಿ ಕ್ರಮವಹಿಸಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಸ್ಥಾಪಿಸುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆಂತರಿಕ ಸೋರಿಕೆ, ಪೋಲು ಕಡಿಮೆ ಮಾಡಿದರೆ ಸಂಸ್ಥೆ ಲಾಭದಾಯಕವಾಗಲು ಸಾಧ್ಯವಾಗುತ್ತದೆ. ಹುಬ್ಬಳ್ಳಿ ಅಮರಗೋಳದ ಎಪಿಎಂಸಿ ಆವರಣದಲ್ಲಿ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯದ ಶಾಶ್ವತ ಕಟ್ಟಡ ನಿರ್ಮಿಸುವುದು ಸೂಕ್ತ ಎಂದು ಹೇಳಿದರು.

ಪೊಲೀಸ್ ಹಾಗೂ ತನಿಖೆ ವ್ಯವಸ್ಥೆ ಬಲಪಡಿಸಲು ಇನ್ನಷ್ಟು ಸುಧಾರಣಾತ್ಮಕ ಕ್ರಮಗಳು ಅವಶ್ಯ- ಜಗದೀಶ್ ಶೆಟ್ಟರ್.. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಮಾತನಾಡಿ, ಈ ಹಿಂದೆ ವಿಧಿ-ವಿಜ್ಞಾನ ಪ್ರಯೋಗಾಲಯದ ವರದಿಗಳು ವಿಳಂಬವಾಗುತ್ತಿದ್ದ ಕಾರಣಕ್ಕೆ ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯದಾನ ಮಾಡುವುದು ಕಷ್ಟವಾಗುತ್ತಿತ್ತು.

ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಅನೇಕ ಪ್ರಕರಣಗಳು ವಿಲೇವಾರಿಯಾದ ಉದಾಹರಣೆಗಳಿವೆ. ಪೊಲೀಸ್ ಹಾಗೂ ತನಿಖೆ ವ್ಯವಸ್ಥೆ ಬಲಪಡಿಸಲು ಇನ್ನಷ್ಟು ಸುಧಾರಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು‌. ಪೊಲೀಸ್ ಠಾಣೆಗಳು, ನ್ಯಾಯವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆಗೆ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಉದಾರವಾಗಿ ಭೂಮಿ ನೀಡಬೇಕು ಎಂದರು.

ಓದಿ: ಉಕ್ರೇನ್​ನಿಂದ ಹಿಂದಿರುಗಿದ ರಾಣೆಬೆನ್ನೂರು ವಿದ್ಯಾರ್ಥಿ: ನವೀನ್​ ಸಾವಿನ ಕುರಿತು ಮಾಹಿತಿ ಬಿಚ್ಚಿಟ್ಟ ಜೂನಿಯರ್​

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.